*ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ (ನವೆಂಬರ್ 11) ಎರಡು ದಿನಗಳ ಭೂತಾನ್ ಪ್ರವಾಸವನ್ನು ಆರಂಭಿಸಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಅವರು ಭೂತಾನ್‌ನ ನಾಲ್ಕನೇ ದೊರೆ ಜಿಗ್ಮೆ ಸಿಂಗ್ಯೆ ವಾಂಗ್‌ಚುಕ್ ಅವರ 70ನೇ ಜನ್ಮದಿನಾಚರಣೆಯಲ್ಲಿ ಭಾಗವಹಿಸಲಿದ್ದು, ಪುನಾತ್ಸಾಂಗ್ಚು-II ಜಲವಿದ್ಯುತ್ ಯೋಜನೆಯನ್ನು ಉದ್ಘಾಟಿಸಲಿದ್ದಾರೆ.
* ಭಾರತ ಮತ್ತು ಭೂತಾನ್ ನಡುವಿನ ಸ್ನೇಹ ಮತ್ತು ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಈ ಪ್ರವಾಸದ ಪ್ರಮುಖ ಗುರಿಯಾಗಿದೆ.
* 1,020 ಮೆಗಾವಾಟ್ ಸಾಮರ್ಥ್ಯದ ಈ ದೊಡ್ಡ ಯೋಜನೆ ಭೂತಾನ್‌ನ ಪುನಾಖಾ ಪ್ರದೇಶದಲ್ಲಿ ನಿರ್ಮಾಣಗೊಂಡಿದ್ದು, ಇದು ಭಾರತದಿಂದ ಹಣಕಾಸು ಮತ್ತು ತಾಂತ್ರಿಕ ಸಹಾಯದೊಂದಿಗೆ ಪೂರ್ಣಗೊಂಡಿದೆ.
* ಈ ಯೋಜನೆ ಭೂತಾನ್‌ನ ಜಲವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಸುಮಾರು 40 ಶೇಕಡಾ ಹೆಚ್ಚಿಸುವುದರೊಂದಿಗೆ, ದೇಶವನ್ನು ಶುದ್ಧ ಶಕ್ತಿ ಉತ್ಪಾದನೆಯ ಕೇಂದ್ರವಾಗಿಸಲು ಸಹಕಾರಿ ಆಗಲಿದೆ.
* ಪ್ರವಾಸದ ವೇಳೆ, ಅವರು ಭೂತಾನ್‌ನ ಪ್ರಸ್ತುತ ದೊರೆ ಜಿಗ್ಮೆ ಖೇಸರ್ ನಾಮ್ಗ್ಯಾಲ್ ವಾಂಗ್‌ಚುಕ್, ನಾಲ್ಕನೇ ದೊರೆ, ಮತ್ತು ಪ್ರಧಾನಿ ಶೆರಿಂಗ್ ತೊಬ್ಗೆ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
* ಭೇಟಿಯ ಮತ್ತೊಂದು ಪ್ರಮುಖ ಮೈಲಿಗಲ್ಲು ಎಂದರೆ, ಭಾರತ ಮತ್ತು ಭೂತಾನ್ ಸಹಭಾಗಿತ್ವದಲ್ಲಿ ನಿರ್ಮಿಸಲಾದ ಪುನಾತ್ಸಾಂಗ್ಚು-II ಜಲವಿದ್ಯುತ್ ಯೋಜನೆಯ ಉದ್ಘಾಟನೆಯಾಗಿದೆ. ಇದು ಉಭಯ ದೇಶಗಳ ನಡುವಿನ ಯಶಸ್ವಿ ಇಂಧನ ಸಹಭಾಗಿತ್ವದಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ.
* ಭಾರತ ಮತ್ತು ಭೂತಾನ್ ನಡುವೆ ಆಳವಾದ ಪರಸ್ಪರ ನಂಬಿಕೆ, ತಿಳುವಳಿಕೆ ಮತ್ತು ಸದ್ಭಾವನೆಯನ್ನು ಆಧರಿಸಿದ ಮಾದರಿ ಸ್ನೇಹ ಸಂಬಂಧವಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
* "ನಮ್ಮ ಈ ಪಾಲುದಾರಿಕೆಯು ನಮ್ಮ 'ನೆರೆಹೊರೆ ಮೊದಲು' ನೀತಿಯ ಪ್ರಮುಖ ಆಧಾರಸ್ತಂಭವಾಗಿದೆ ಮತ್ತು ನೆರೆಯ ದೇಶಗಳ ನಡುವಿನ ಸೌಹಾರ್ದಯುತ ಸಂಬಂಧಗಳಿಗೆ ಒಂದು ಮಾದರಿಯಾಗಿದೆ," ಎಂದು ಮೋದಿ ತಿಳಿಸಿದ್ದಾರೆ.
* ಈ ಯೋಜನೆಯಿಂದ ಆಗುವ ವಿದ್ಯುತ ಉತ್ಪಾದನೆ ಭಾರತ ಮತ್ತು ಭೂತಾನ್ ಎರಡು ರಾಷ್ಟ್ರಗಳ ಪೂರೈಕೆ ಆಗಲಿದೆ.ಇದೆ ಸಂದರ್ಭದಲ್ಲಿ ಭೂತಾನ್ ವಿದ್ಯುತ ಯೋಜನೆಗಳ ಅನುಷ್ಠಾನಕ್ಕೆ ಭಾರತ 4000 ಕೋಟಿ ರೂ.ಗಳ ಸಾಲವನ್ನು ಘೋಷಿಸಿದೆ.
* ಭೂತಾನ್‌ನ ಜಲವಿದ್ಯುತ್ ಶಕ್ತಿ ಭಾರತಕ್ಕೆ ಪ್ರಮುಖವಾಗಿ ರಫ್ತು ಆಗುತ್ತದೆ. ಈ ಸಹಕಾರದಿಂದ ಭಾರತಕ್ಕೆ ನವೀಕರಿಸಬಹುದಾದ ಶಕ್ತಿ ದೊರೆಯುವ ಜೊತೆಗೆ, ಭೂತಾನ್‌ಗೆ ಆರ್ಥಿಕ ಆದಾಯದ ಮೂಲವೂ ವೃದ್ಧಿಯಾಗಿದೆ. “ನೆಬೈರ್ಹುಡ್ ಫಸ್ಟ್” (Neighbourhood First) ನೀತಿಯಡಿ ಭಾರತದ ಪ್ರಾದೇಶಿಕ ಶಕ್ತಿ ಸಹಕಾರ ಬಲಗೊಂಡಿದ್ದು, ಇಂಧನ ಸ್ವಾವಲಂಬನೆಯತ್ತ ಭಾರತದ ಹೆಜ್ಜೆಯನ್ನು ಇದು ಮತ್ತಷ್ಟು ದೃಢಪಡಿಸುತ್ತದೆ.
* ಪುನಾತ್ಸಾಂಗ್ಚು–II ಯೋಜನೆಯ ಉದ್ಘಾಟನೆ ಭಾರತ ಮತ್ತು ಭೂತಾನ್ ನಡುವಿನ ರಾಜತಾಂತ್ರಿಕ, ಆರ್ಥಿಕ ಹಾಗೂ ತಾಂತ್ರಿಕ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಿದ್ದು, ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಶುದ್ಧ ಶಕ್ತಿಯ ಸಹಕಾರದ ಹೊಸ ಅಧ್ಯಾಯವನ್ನು ತೆರೆದಿದೆ. ಈ ಮೂಲಕ ಎರಡೂ ರಾಷ್ಟ್ರಗಳು ಶಾಶ್ವತ ಶಕ್ತಿ ಭವಿಷ್ಯ ನಿರ್ಮಾಣದ ದಿಕ್ಕಿನಲ್ಲಿ ಮುನ್ನಡೆಯುತ್ತಿವೆ.
* “ಭಾರತ ಮತ್ತು ಭೂತಾನ್‌ನ ಸಹಭಾಗಿತ್ವ ಕೇವಲ ಶಕ್ತಿ ಉತ್ಪಾದನೆಗಷ್ಟೇ ಸೀಮಿತವಾಗಿಲ್ಲ; ಅದು ಪರಿಸರ ಸಂರಕ್ಷಣೆ, ಪ್ರಾದೇಶಿಕ ಅಭಿವೃದ್ಧಿ ಮತ್ತು ಭವಿಷ್ಯದ ಹಸಿರು ಬೆಳವಣಿಗೆಯ ದೃಷ್ಟಿಯಾಗಿದೆ.”
ಗುರುವಾರ, 13 ನವೆಂಬರ್ 2025
11:30 ಪೂರ್ವಾಹ್ನ
Daily PDF
ಭೂತಾನ್ನಲ್ಲಿ ಪುನಾತ್ಸಾಂಗ್ಚು–II ಯೋಜನೆ: ಭಾರತ–ಭೂತಾನ್ ಸಹಕಾರದ ನವ ಶಕ್ತಿ ಅಧ್ಯಾಯ
Authored by:
Akshata Halli