* ಭೂಮಿಗೆ ಹೋಲಿಸಿದರೆ ಚಂದ್ರನ ಮೇಲೆ ಸಮಯವೂ ವೇಗವಾಗಿ ಚಲಿಸುತ್ತದೆ ಎಂಬ ವಿಷಯವನ್ನು ನಾಸಾ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ಈ ಸಂಗತಿಯು ಮುಂಬರುವ ಯೋಜನೆಗಳಿಗೆ ಅತ್ಯಂತ ಸಹಕಾರಿಯಾಗಿದೆ ಎಂದು ನಾಸಾ ಹೇಳಿದೆ.
* ಚಂದ್ರನ ಮೇಲಿನ ಸಮಯವು ಭೂಮಿಗಿಂತ ದಿನಕ್ಕೆ 57.50 ಮೈಕ್ರೋಸೆಕೆಂಡ್ಸ್ ಗಳಷ್ಟು ವೇಗವಾಗಿ ಚಲಿಸುತ್ತದೆ ಎಂದು ನಾಸಾ ವಿಜ್ಞಾನಿಗಳ ಸಂಶೋಧನೆ ತಿಳಿಸಿದೆ.
* ಬಾಹ್ಯಾಕಾಶ ಯೋಜನೆಗಳಲ್ಲಿ ನ್ಯಾವಿಗೇಷನ್ ಮತ್ತು ಸಂವಹನದಲ್ಲಿ ಸಮಯ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಗುರುತ್ವಾಕರ್ಷಣೆಯ ಶಕ್ತಿಯ ಆಧಾರದ ಮೇಲೆ ವಿಭಿನ್ನವಾಗಿ ಚಲಿಸುವ ಸಮಯದ ಪರಿಕಲ್ಪನೆಯು ಆಲ್ಬರ್ಟ್ ಐನ್‌ಸ್ಟೀನ್ ಅವರ 'ಜನರಲ್ ಥಿಯರಿ ರಿಲೇಟಿವಿಟಿ' ಯನ್ನು ಅವಲಂಬಿಸಿದೆ.
* ಚಂದ್ರನು ಭೂಮಿಯ ಗುರುತ್ವಾ ಕರ್ಷಣೆಯ 6ನೇ ಒಂದು ಭಾಗವನ್ನು ಹೊಂದಿರುವ ಹಿನ್ನೆಲೆಯಲ್ಲಿ ಸಮಯವು ವೇಗವಾಗಿ ಹಾದು ಹೋಗುತ್ತದೆ.
ಶನಿವಾರ, 13 ಜುಲೈ 2024
12:23 ಅಪರಾಹ್ನ
Daily PDF
ಭೂಮಿ ಮತ್ತು ಚಂದ್ರನ ನಡುವಿನ ಸಮಯದ ವ್ಯತ್ಯಾಸವನ್ನು ಪ್ರಮಾಣೀಕರಿಸಿದ ನಾಸಾ
Authored by:
Jyoti Angadi