* ಭರತನಾಟ್ಯ ನೃತ್ಯಗಾರ್ತಿ ರುಕ್ಮಿಣಿ ಚಟರ್ಜಿ ಅವರಿಗೆ ಮಾರ್ಚ್ 26 ರಂದು (ಮಂಗಳವಾರ) ಫ್ರೆಂಚ್ ರಾಯಭಾರ ಕಚೇರಿಯಲ್ಲಿ ಚೆವಲಿಯರ್ ಡಾನ್ಸ್ ಎಲ್ ಆರ್ಡ್ರೆ ಡೆಸ್ ಆರ್ಟ್ಸ್ ಎಟ್ ಡೆಸ್ ಲೆಟ್ರೆಸ್ (ನೈಟ್ ಆಫ್ ದಿ ಆರ್ಡರ್ ಆಫ್ ಆರ್ಟ್ಸ್ ಅಂಡ್ ಲೆಟರ್ಸ್) ಗೌರವವನ್ನು ಸ್ವೀಕರಿಸಿದರು.
* ಕಲೆ, ಸಂಸ್ಕೃತಿ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಸೃಜನಶೀಲತೆಯಿಂದ ತಮ್ಮನ್ನು ತಾವು ಗುರುತಿಸಿಕೊಂಡ ವ್ಯಕ್ತಿಗಳಿಗೆ ಅಥವಾ ಅವರ ಕೊಡುಗೆಗಾಗಿ ಫ್ರೆಂಚ್ ಸರ್ಕಾರದ ವಿಶಿಷ್ಟವಾದ ಎಲ್'ಆರ್ಡ್ರೆ ಡೆಸ್ ಆರ್ಟ್ಸ್ ಎಟ್ ಡೆಸ್ ಲೆಟ್ರೆಸ್ (ನೈಟ್ ಆಫ್ ದಿ ಆರ್ಡರ್ ಆಫ್ ಆರ್ಟ್ಸ್ ಅಂಡ್ ಲೆಟರ್ಸ್) ಅನ್ನು ನೀಡಲಾಗುತ್ತದೆ.
* ಜಗತ್ತಿನಾದ್ಯಂತ ಚಟರ್ಜಿಯವರ ಕಲಾತ್ಮಕ ಸಾಧನೆಗಳನ್ನು ಮತ್ತು ಪ್ರದರ್ಶನ ಕಲೆಗಳ ಮೂಲಕ ಇಂಡೋ-ಫ್ರೆಂಚ್ ಸಾಂಸ್ಕೃತಿಕ ಸಂಬಂಧಕ್ಕೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ಈ ಗೌರವವನ್ನು ನೀಡಲಾಗಿದೆ ಎಂದು ಭಾರತದಲ್ಲಿನ ಫ್ರಾನ್ಸ್ ರಾಯಭಾರಿ ಥಿಯೆರಿ ಮ್ಯಾಥೌ ಅವರು ತಿಳಿಸಿದ್ದಾರೆ.
ಭರತನಾಟ್ಯ ನೃತ್ಯಗಾರ್ತಿ ರುಕ್ಮಿಣಿ ಚಟರ್ಜಿ ಅವರಿಗೆ ಪ್ರೆಂಚ್ ಗೌರವ
Published by Bhagya R K
29 ಮಾರ್ಚ್ 2024