* ಗುಜರಾತ್ ನ ವಡೋದರಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಅವರು C-295 ಮಿಲಿಟರಿ ವಿಮಾನ ತಯಾರಿಕೆಯ ಘಟಕವಾದ ಟಾಟಾ ಏರ್‌ಕ್ರಾಫ್ಟ್ ಕಾಂಪ್ಲೆಕ್ಸ್‌ಅನ್ನು ಅಕ್ಟೊಬರ್ 28ರಂದು ಉದ್ಘಾಟಿಸಿದರು.
* ಇದು ಸೇನಾ ವಿಮಾನ ತಯಾರಿಕೆಗೆ ಸ್ಥಾಪನೆಯಾದ ದೇಶದ ಮೊದಲ ಖಾಸಗಿ ಮಿಲಿಟರಿ ವಿಮಾನ ತಯಾರಿಕೆ ಘಟಕವಾಗಿದೆ.
* Airbus ಸಹಭಾಗಿತ್ವದಲ್ಲಿ ಟಾಟಾ ಏರ್‌ಕ್ರಾಫ್ಟ್ ಕಾಂಪ್ಲೆಕ್ಸ್ ನಿರ್ಮಿಸುತ್ತಿರುವ ಮೊದಲ C 295 ವಿಮಾನವನ್ನು ಮುಂದಿನ ಎರಡು ವರ್ಷಗಳಲ್ಲಿ ಪೂರೈಸುವ ಗುರಿ ಹೊಂದಿರುವುದಾಗಿ ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅಕ್ಟೊಬರ್ 28ರಂದು ತಿಳಿಸಿದ್ದಾರೆ.
* ಈ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಚಂದ್ರಶೇಖರನ್, ಈಗಿನಿಂದ ನಿಖರವಾಗಿ ಎರಡು ವರ್ಷಗಳ ನಂತರ ನಾವು ದೇಶಿಯವಾಗಿ ತಯಾರಿಸಿದ ಮೊದಲ C-295 ವಿಮಾನವನ್ನು ತಲುಪಿಸುತ್ತೇವೆ ಎಂದು ಹೇಳಿದರು.
* ಇನ್ನೇರಡು ವರ್ಷಗಳಲ್ಲಿ ಮೊದಲ ವಿಮಾನವನ್ನು ತಲುಪಿಸುತ್ತೇವೆ. ಈ ಯೋಜನೆಯು ಮುಂದಿನ ಪೀಳಿಗೆಯ ಮುಂದುವರಿದ ಉತ್ಪಾದನೆಗೆ ಭಾರತವನ್ನು ಮುನ್ನಡೆಸುತ್ತದೆ. ಇದು ವೈವಿಧ್ಯಮಯ ಮತ್ತು ಅತ್ಯಾಧುನಿಕತೆಯ ಕೌಶಲ್ಯ ಪರಿಸರ ವ್ಯವಸ್ಥೆ ನಿರ್ಮಿಸುತ್ತದೆ. ಜೊತೆಗೆ ವಾಯುಪಡೆಗೆ ಹೆಚ್ಚು ಅಗತ್ಯವಾದದ್ದನ್ನು ಪೂರೈಸುತ್ತದೆ. ನಮ್ಮ ಉದ್ಯಮಿಗಳು ಮತ್ತು ಯುವಕರಿಗೆ ಹೆಚ್ಚಿನ ತಂತ್ರಜ್ಞಾನದ ಅವಕಾಶಗಳನ್ನು ನೀಡುತ್ತದೆ ಎಂದರು.
* C-295 ವಿಮಾನ ತಯಾರಿಕೆ ಕಾರ್ಯಕ್ರಮದ ಅಡಿಯಲ್ಲಿ ಒಟ್ಟು 56 ವಿಮಾನಗಳಿವೆ, ಅದರಲ್ಲಿ 16 ಸ್ಪೇನ್‌ನಿಂದ ನೇರವಾಗಿ ಏರ್‌ಬಸ್‌ನಿಂದ ತಲುಪಿಸುತ್ತಿದೆ ಮತ್ತು ಉಳಿದ 40 TATA ಏರ್‌ಕ್ರಾಫ್ಟ್ ಕಾಂಪ್ಲೆಕ್ಸ್‌ನಲ್ಲಿ ನಿರ್ಮಿಸಲಾಗುವುದು. ಇದು ರಾಷ್ಟ್ರದ ರಕ್ಷಣಾ ವಲಯದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ.
* ಸಿ-295 ಎಂಬುದು ಮಧ್ಯಮಗಾತ್ರದ ಸೇನಾ ಸರಕು ಸಾಗಣೆ ವಿಮಾನವಾಗಿದೆ. ಇದನ್ನು ವಿನ್ಯಾಸ ಮಾಡಿರುವುದು ಮತ್ತು ಮೊದಲು ತಯಾರಿಸುತ್ತಿದುದು ಸ್ಪೇನ್‌ನ ವಿಮಾನಯಾನ ಸಂಸ್ಥೆ ಸಿಎಎಸ್ಎ. ಸದ್ಯ ಇದು ಯುರೋಪಿಯನ್ ಮಲ್ಟಿನ್ಯಾಷನಲ್ ಏರ್‌ಬಸ್ ಡಿಫೆನ್ಸ್ ಮತ್ತು ಸ್ಪೇಸ್ ಡಿವಿಷನ್ ಭಾಗವಾಗಿದೆ.
* ಸಿ-295 ವಿಮಾನವನ್ನು ವೈದ್ಯಕೀಯ ಸ್ಥಳಾಂತರ, ವಿಪತ್ತು ಪ್ರತಿಕ್ರಿಯೆ ಮತ್ತು ಕಡಲತಡಿಯ ಗಸ್ತು ಕರ್ತವ್ಯಕ್ಕೆ ಬಳಸಲಾಗುತ್ತದೆ.
ಬುಧವಾರ, 30 ಅಕ್ಟೋಬರ್ 2024
11:26 ಪೂರ್ವಾಹ್ನ
Daily PDF
ಭಾರತಕ್ಕೆ ಸ್ಪೇನ್ ಪ್ರಧಾನಿ ಪೆಡ್ರೋ : ಟಾಟಾ ಏರ್ ಕ್ರಾಫ್ಟ್ ಕಾಂಪ್ಲೆಕ್ಸ್, ಉದ್ಘಾಟನೆ
Authored by:
Jyoti Angadi