* ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟದ ಎಸ್‌ಎಲ್ 3 ಫೈನಲ್‌ನಲ್ಲಿ ಭಾರತದ ನಿತೀಶ್ ಕುಮಾರ್ ಇತಿಹಾಸ ನಿರ್ಮಿಸಿದ್ದಾರೆ.
* ಪುರುಷರ SL3 ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ನಿತೀಶ್ ಗ್ರೇಟ್ ಬ್ರಿಟನ್‌ನ ಡೇನಿಯಲ್ ಬೆಥೆಲ್ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಇದರೊಂದಿಗೆ ಭಾರತ ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಒಟ್ಟು 9 ಪದಕಗಳನ್ನು ತನ್ನದಾಗಿಸಿಕೊಂಡಿದೆ.
* ಒಂದು ಗಂಟೆ 20 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಹರಿಯಾಣದ 29 ವರ್ಷದ ನಿತೇಶ್ ಕುಮಾರ್ 21-14, 18-21, 23-21, ರಿಂದ ಟೋಕಿಯೊ ಬೆಳ್ಳಿ ಪದಕ ವಿಜೇತ ಡೇನಿಯಲ್ ಬೆಥೆಲ್ ಅವರನ್ನು ಸೋಲಿಸಿದ್ದರು.
* ಪ್ರಸಕ್ತ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 2 ಚಿನ್ನ, 3 ಬೆಳ್ಳಿ, 4 ಕಂಚಿನ ಪದಕಗಳನ್ನು ಗಳಿಸಿದಂತಾಗಿದೆ.
* ಮಹಿಳೆಯರ 10 ಮೀಟರ್ ಏರ್ ರೈಫಲ್ ಶೂಟಿಂಗ್ ಸ್ಟ್ಯಾಂಡಿಂಗ್ SH1 ನಲ್ಲಿ ಅವನಿ ಲೆಖರಾ ಐತಿಹಾಸಿಕ ಪದಕವನ್ನು ಪಡೆದ ನಂತರ ನಿತೀಶ್ ಕುಮಾರ್ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಎರಡನೇ ಭಾರತೀಯರಾದರು.
* 2009 ರಲ್ಲಿ ಸಂಭವಿಸಿದ ರೈಲು ಅಪಘಾತವು ಅವನ ಅಂಗಚ್ಛೇದನಕ್ಕೆ ಕಾರಣವಾಯಿತು.
ಸೋಮವಾರ, 02 ಸೆಪ್ಟೆಂಬರ್ 2024
8:02 ಅಪರಾಹ್ನ
Daily PDF
ಭಾರತಕ್ಕೆ ಮತ್ತೊಂದು ಚಿನ್ನ: ಬ್ಯಾಡ್ಮಿಂಟನ್ನಲ್ಲಿ ಇತಿಹಾಸ ನಿರ್ಮಿಸಿದ ನಿತೀಶ್ ಕುಮಾರ್
Authored by:
Jyoti Angadi