* ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಿಂದ ಇರಾನ್ ಸರ್ಕಾರವು  ಫೆಬ್ರುವರಿ ಯಲ್ಲಿ ಭಾರತೀಯ ಪ್ರವಾಸಿಗರಿಗೆ ವೀಸಾ-ಮುಕ್ತ  ಪ್ರವೇಶವನ್ನು ಘೋಷಿಸಿದೆ.
* ವೀಸಾ ಇಲ್ಲದೆಯೇ ಭಾರತೀಯರ ಪ್ರವೇಶಕ್ಕೆ ಅವಕಾಶ ನೀಡಿದ ದೇಶಗಳ ಸಾಲಿನಲ್ಲಿ ಇದೀಗ ಇರಾನ್ ದೇಶವು ಕೂಡಾ ಸೇರ್ಪಡೆಯಾಗಿದೆ. 
* ಇರಾನ್ 2023 ರ ಡಿಸೆಂಬರ್‌ನಲ್ಲೇ ವೀಸಾ ವಿನಾಯಿತಿ ಯೋಜನೆಯನ್ನು ಪ್ರಕಟಿಸಲಾಗಿತ್ತು . ಭಾರತ ಮಾತ್ರವಲ್ಲದೆ  ಇತರ 32 ದೇಶಗಳಿಗೂ ಈ ಸೌಲಭ್ಯವನ್ನು ಕಲ್ಪಸಿದೆ . ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ಹಾಗೂ ಜಗತ್ತಿನಾದ್ಯಂತದಿಂದ ಪ್ರವಾಸಿಗರನ್ನು ಸೆಳೆಯುವುದು ಈ ವಿನಾಯಿತಿಯ ಉದ್ದೇಶವಾಗಿದೆ . 
* ಭಾರತೀಯ ಪ್ರವಾಸಿಗರು ಇನ್ನುಮುಂದೆ ವೀಸಾ ಇಲ್ಲದೆಯೇ ಗರಿಷ್ಠ 15 ದಿನಗಳವರೆಗೆ ಇರಾನ್‌ನಲ್ಲಿ ವಾಸಿಸಬಹುದು. ವೀಸಾ ಮುಕ್ತ ಪ್ರವೇಶವನ್ನು ಬಯಸುವ ಭಾರತೀಯ ಪ್ರವಾಸಿಗರು ಖಡ್ಡಾಯವಾಗಿ ನಾಲ್ಕು ರೀತಿಯ ಷರತ್ತುಗಳನ್ನು ಪಾಲಿಸಬೇಕು.
1)ರಾಜತಾಂತ್ರಿಕವಲ್ಲದ ಸಾಮಾನ್ಯ ಪಾಸ್ ಪೋರ್ಟ್ ಹೊಂದಿರಬೇಕು .
2)ವಿಮಾನ ಪ್ರಯಾಣದ ಮೂಲಕವೇ ಇರಾನ್ ಗೆ ಆಗಮಿಸಬೇಕು .
3)ಪ್ರವಾಸ ಉದ್ದೇಶಕ್ಕೆ ಮಾತ್ರ ಉಳಿದುಕೊಳ್ಳಬೇಕು .
4)ಪ್ರತಿ 6 ತಿಂಗಳಲ್ಲಿ15 ದಿನ ಮಾತ್ರ ವಾಸ್ತವ್ಯ. 
* ಭಾರತೀಯ ಪ್ರವಾಸಿಗರು 15 ದಿನಗಳಿಗಿಂತ ಹೆಚ್ಚು ಕಾಲ ಉಳಿಯಲು ಬಯಸಿದರೆ ಅಥವಾ ಆರು ತಿಂಗಳ ಅವಧಿಯಲ್ಲಿ ಹೆಚ್ಚು ನಮೂದುಗಳನ್ನು ಮಾಡಲು ಬಯಸಿದರೆ ಅವರು ಭಾರತದಲ್ಲಿ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಆಯಾ ಪ್ರಾತಿನಿಧ್ಯಗಳ ಮೂಲಕ ಅಗತ್ಯ ವೀಸಾಗಳನ್ನು ಪಡೆಯಬೇಕು.
*  ವೀಸಾ ವಿನಾಯಿತಿಯು ವಾಯು ಗಡಿಗಳ ಮೂಲಕ ಇರಾನ್‌ಗೆ ಪ್ರವೇಶಿಸುವ ಭಾರತೀಯ ಪ್ರಜೆಗಳಿಗೆ ಮಾತ್ರ ಅನ್ವಯಿಸುತ್ತದೆ.
* ಪ್ರಸ್ತುತ 27 ದೇಶಗಳು ಭಾರತೀಯ ಪ್ರಜೆಗಳು ವೀಸಾ ಇಲ್ಲದೆ ಪ್ರವೇಶಿಸುವುದಕ್ಕೆ ಅನುಮತಿ ನೀಡಿದೆ .ಮಲೇಷ್ಯಾ ,ಶ್ರೀಲಂಕಾ ,ಥಾಯ್ಲೆಂಡ್ ,ಕೆನ್ಯಾ,ಇಂಡೋನೇಷ್ಯಾ, ವಿಯೆಟ್ನಾಂ,ಬಾರ್ಬಡೋಸ್ ,ಭೂತಾನ್ ,ಡೊಮಿನಿಕಾ ,ಹೈಟಿ ,ಮಾಲ್ಡೀವ್ಸ, ಮಾರಿಷಸ್,ನೇಪಾಳ ,ಸಮೋವಾ ಮತ್ತು ಟ್ರಿನಿಡಾಡ್ -ಟೊಬ್ಯಾಗೋ ಇವುಗಳಲ್ಲಿ ಸೇರಿವೆ.