* ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನಂತರ, ಭಾರತದ ಸ್ಟಾರ್ ಪಿಸ್ತೂಲ್ ಶೂಟರ್ ಮನು ಭಾಕರ್ ಅವರನ್ನು ಸೋಮವಾರ ಬಿಬಿಸಿ ಭಾರತೀಯ ವರ್ಷದ ಕ್ರೀಡಾಪಟು ಎಂದು ಹೆಸರಿಸಲಾಯಿತು.
* ಭಾರತೀಯ ಕ್ರೀಡೆಗೆ ನೀಡಿದ ಅಸಾಧಾರಣ ಕೊಡುಗೆಗಳಿಗಾಗಿ ಆಯ್ಕೆಯಾದ ಐದು ಮಂದಿಯಲ್ಲಿ ಶೂಟರ್ ಮನು ಭಾಕರ್, ಗಾಲ್ಫ್ ಆಟಗಾರ್ತಿ ಆದಿತಿ ಅಶೋಕ್, ಪ್ಯಾರಾ ಶೂಟರ್ ಅವನಿ ಲೇಖರಾ, ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಹಾಗೂ ಕುಸ್ತಿಪಟು ವಿನೇಶ್ ಫೋಗಟ್ ಸೇರಿದ್ದಾರೆ.
* ISWOTY ಪ್ರಶಸ್ತಿಯ ಐದನೇ ಆವೃತ್ತಿಯಲ್ಲಿ ಶ್ರೇಷ್ಠ ತೀರ್ಪುಗಾರರ ತಂಡವು ಶಾರ್ಟ್‌ಲಿಸ್ಟ್ ಮಾಡಿದ ಮಹಿಳಾ ಕ್ರೀಡಾಪಟುಗಳ ಸಾಧನೆಗಳನ್ನು ಗೌರವಿಸುತ್ತದೆ.
* ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 10 ಮೀ. ಏರ್ ಪಿಸ್ತೂಲ್ ವೈಯಕ್ತಿಕ ಹಾಗೂ ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚು ಗೆದ್ದು, ಸ್ವಾತಂತ್ರ್ಯದ ನಂತರ ಒಂದೇ ಕ್ರೀಡಾಕೂಟದಲ್ಲಿ ಬಹು ಪದಕಗಳ ಗೆಲುವಿನ ಹೆಗ್ಗಳಿಕೆ ಪಡೆದಿದ್ದಾರೆ.
* 2018ರಲ್ಲಿ ಕೇವಲ 16ನೇ ವಯಸ್ಸಿನಲ್ಲಿ ವಿಶ್ವಕಪ್ ಚಿನ್ನ ಗೆದ್ದ ಅತ್ಯಂತ ಕಿರಿಯ ಭಾರತೀಯ ಶೂಟರ್ ಆಗಿದ್ದಾರೆ. ಅರ್ಜುನ ಪ್ರಶಸ್ತಿ ಪುರಸ್ಕೃತ ಮನು, 2021ರಲ್ಲಿ ಬಿಬಿಸಿಯ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿ ಪಡೆದಿದ್ದರು. ಇತರ ಪ್ರಶಸ್ತಿ ವಿಜೇತರಲ್ಲಿ ಶೀತಲ್ ದೇವಿ, ಮಿಥಾಲಿ ರಾಜ್ ಹಾಗೂ ಅವನಿ ಸೇರಿದ್ದಾರೆ.
ಭಾರತೀಯ ವರ್ಷದ ಕ್ರೀಡಾಪಟು: ಮನು ಭಾಕರ್ಗೆ ಬಿಬಿಸಿ ಗೌರವ
Published by Jyoti Angadi
20 ಫೆಬ್ರವರಿ 2025