* ಭಾರತೀಯ ಸೇನೆಯು ಜೂನ್ 18 ರಂದು ದೃಷ್ಟಿ-10 ಹೆಸರಿನ ಮೊದಲ ಹರ್ಮ್ಸ್-900 ಸ್ಟಾರ್‌ಲೈನರ್ ಡ್ರೋನ್‌ಗಳನ್ನು ಸ್ವೀಕರಿಸಲು ಸಿದ್ಧವಾಗಿದೆ.
* ತುರ್ತು ಅಧಿಕಾರವನ್ನು ಬಳಸಿಕೊಳ್ಳುವ ಒಪ್ಪಂದದ ಅಡಿಯಲ್ಲಿ ಅದಾನಿ ಡಿಫೆನ್ಸ್ ಸಿಸ್ಟಮ್ ಈ ದೇಶೀಯ ಡೋನ್ ಗಳನ್ನೂ ತಯಾರಿಸಿದೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
* ದೃಷ್ಟಿ-10 ಎಂದೂ ಕರೆಯಲ್ಪಡುವ ಹರ್ಮ್ಸ್-900 ಸ್ಟಾರ್‌ಲೈನರ್ ಡ್ರೋನ್‌ಗಳನ್ನು ಅದಾನಿ ಡಿಫೆನ್ಸ್ ಸಿಸ್ಟಮ್ಸ್ ಭಾರತೀಯ ಸೇನೆಗೆ ಒದಗಿಸುತ್ತಿದೆ.
* ಹರ್ಮ್ಸ್-900 ಸ್ಟಾರ್ ಲೈನರ್ ಡ್ರೋನ್ ಗಳು 30 ಗಂಟೆಗಳಿಗೂ ಅಧಿಕ ಸಮಯ ಸುಮಾರು 2 ಸಾವಿರ ಕಿ.ಮೀ ಹಾರಾಡುವ ಸಾಮರ್ಥ್ಯ ಹೊಂದಿದೆ.
* "ಭಾರತೀಯ ಸೇನೆಯು ಸ್ವಾಧೀನಪಡಿಸಿಕೊಂಡಿರುವ ಎರಡು ಡ್ರೋನ್‌ಗಳಲ್ಲಿ ಮೊದಲನೆಯದನ್ನು ಹೈದರಾಬಾದ್‌ನಲ್ಲಿ ಜೂನ್ 18 ರಂದು ಪಡೆಗೆ ಹಸ್ತಾಂತರಿಸಲಾಗುವುದು.
* ಭಾರತೀಯ ಸೇನೆಯು ಈಗಾಗಲೇ ಹೆರಾನ್ ಮಾರ್ಕ್ 1 ಮತ್ತು ಮಾರ್ಕ್ 2 ಡ್ರೋನ್‌ಗಳನ್ನು ನಿರ್ವಹಿಸುತ್ತಿದೆ ಮತ್ತು ಪಡೆಗಳಿಗೆ ಸರ್ಕಾರವು ಅನುಮೋದಿಸಿದ ತುರ್ತು ಖರೀದಿಗಳ ಕೊನೆಯ ಕಂತಿನ ಅಡಿಯಲ್ಲಿ ದೃಷ್ಟಿ-10 ಅಥವಾ ಹರ್ಮ್ಸ್-900 ಡ್ರೋನ್‌ಗಳಿಗೆ ಆದೇಶವನ್ನು ನೀಡಿದೆ.
* ಹರ್ಮ್ಸ್ -900 ಸ್ಟಾರ್ ಲೈನರ್ ಒಂದು ಸುಧಾರಿತ ಮಾನವರಹಿತ ಡೋನ್ ಆಗಿದ್ದು, ಇದು ಸುಮಾರು 15 ಮೀಟರ್ ರೆಕ್ಕೆಗಳನ್ನು ಇದು ಹೊಂದಿದ್ದು, 30 ಸಾವಿರ ಅಡಿ ಎತ್ತರದಲ್ಲಿ ಕಾರ್ಯನಿರ್ವಹಿಸಲಿದೆ.
ಬುಧವಾರ, 15 ಮೇ 2024
2:01 ಅಪರಾಹ್ನ
Daily PDF
ಭಾರತೀಯ ಸೇನೆಯು ಜೂನ್ 18 ರಂದು ದೃಷ್ಟಿ -10 ಡ್ರೋನ್ ಸ್ವೀಕರಿಸಲಿದೆ.
Authored by:
Bhagya R K