* ಭಾರತೀಯ ಸೇನೆಯ ಬತ್ತಳಿಕೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಶೀಘ್ರದಲ್ಲೇ ಪಿನಾಕಾ ಶಸ್ತ್ರಾಸ್ತ್ರ ವ್ಯವಸ್ಥೆಗೆ 2800 ಕೋಟಿ ರೂ ಅನುದಾನ ನೀಡಲು ಮುಂದಾಗಿದೆ.
* ರಕ್ಷಣಾ ಸಚಿವಾಲಯವು ಪಿನಾಕಾ ಮಲ್ಟಿ-ಬ್ಯಾರೆಲ್ ರಾಕೆಟ್ ಲಾಂಚರ್ ಸಿಸ್ಟಮ್‌ಗಳಿಗಾಗಿ ಸುಮಾರು 6,400 ರಾಕೆಟ್‌ಗಳನ್ನು ಖರೀದಿಸಲು 2,800 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಅನುಮೋದಿಸಿದೆ.
* ರಕ್ಷಣಾ ಸಚಿವಾಲಯದ ರಕ್ಷಣಾ ಸ್ವಾಧೀನ ಮಂಡಳಿಯ ಇತ್ತೀಚಿನ ಸಭೆಯು ಈ ಎರಡು ರೀತಿಯ ರಾಕೆಟ್‌ಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವನೆಯನ್ನು ಅಂಗೀಕರಿಸಿದೆ. ಇದನ್ನು ಏರಿಯಾ ಡಿನಿಯಲ್ ಮ್ಯೂನಿಷನ್ ಟೈಪ್ 2 ಮತ್ತು ಟೈಪ್-3 ಎಂದು ಕರೆಯಲಾಗುತ್ತದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
* ಪಿನಾಕಾ ರಾಕೆಟ್‌ಗಳ ಪ್ರಯೋಗಗಳನ್ನು ಇತ್ತೀಚೆಗೆ ರಾಜಸ್ಥಾನದ ಪೋಖ್ರಾನ್ ಫೈರಿಂಗ್ ರೇಂಜ್‌ಗಳಲ್ಲಿ ಪಡೆಗಳು ನಡೆಸಿವೆ ಮತ್ತು ಈ ಪರೀಕ್ಷೆಗಳ ಸಮಯದಲ್ಲಿ ಯಶಸ್ವಿ ಪರೀಕ್ಷಾ ಫೈರಿಂಗ್‌ಗಳನ್ನು ನಡೆಸಲಾಗಿದೆ.
* ಖಾಸಗಿ ವಲಯದ ಕಂಪನಿಗಳು ಲಾರ್ಸೆನ್ ಮತ್ತು ಟೂಬ್ರೊ (ಎಲ್ ಅಂಡ್ ಟಿ), ಟಾಟಾ ಡಿಫೆನ್ಸ್ ಮತ್ತು ಎಕನಾಮಿಕ್ ಎಕ್ಸ್‌ಪ್ಲೋಸಿವ್ಸ್ ಲಿಮಿಟೆಡ್ ಸಂಸ್ಥೆಗಳು ಈ ಯೋಜನೆಯಲ್ಲಿ ತೊಡಗಿವೆ. ಈ ಯೋಜನೆ ಸಶಸ್ತ್ರ ಪಡೆಗಳಿಗೆ ಬೃಹತ್ ಪ್ರಮಾಣದಲ್ಲಿ ಸರಬರಾಜು ಮಾಡಲಾಗುತ್ತಿರುವ ಪಿನಾಕಾ ವ್ಯವಸ್ಥೆಗೆ ಉತ್ಪಾದನಾ ಮಾರ್ಗಗಳನ್ನು ಸ್ಥಾಪಿಸಿವೆ.
ಶುಕ್ರವಾರ, 15 ಡಿಸೆಂಬರ್ 2023
5:25 ಅಪರಾಹ್ನ
Daily PDF
ಭಾರತೀಯ ಸೇನೆಗೆ : ಪಿನಾಕಾ ಶಸ್ತ್ರಾಸ್ತ್ರ ವ್ಯವಸ್ಥೆ ಸೇರ್ಪಡೆ
Authored by:
Bhagya R K