* ಅಮೆರಿಕದ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್, ಭಾರತದ ಭೂಸೇನೆಗೆ ಮೂರು AH-64E ಅಪಾಚೆ ಯುದ್ಧ ಹೆಲಿಕಾಪ್ಟರ್‌ಗಳನ್ನು ಹಸ್ತಾಂತರಿಸಿದೆ. ಇದು ಆರು ಹೆಲಿಕಾಪ್ಟರ್ ಪೂರೈಕೆ ಒಪ್ಪಂದದ ಮೊದಲ ಹಂತವಾಗಿದೆ.
* AH-64E ಅಪಾಚೆ ವಿಶ್ವದ ಅತ್ಯಾಧುನಿಕ ಮಲ್ಟಿ-ರೋಲ್ ಯುದ್ಧ ಹೆಲಿಕಾಪ್ಟರ್ ಆಗಿದ್ದು, ಇದನ್ನು ಅಮೆರಿಕ ಸೇನೆ ಸಹ ಬಳಸುತ್ತದೆ.
* ಈ ಹೆಲಿಕಾಪ್ಟರ್‌ಗಳ ಸಹಾಯದಿಂದ ಭಾರತೀಯ ಸೇನೆಯ ಕಾರ್ಯಾಚರಣಾ ಸಾಮರ್ಥ್ಯ ಹೆಚ್ಚಲಿದೆ ಎಂದು ಸೇನೆ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.
* ಈಗಾಗಲೇ 2020ರಲ್ಲಿ ಭಾರತ 22 ಅಪಾಚೆ ಹೆಲಿಕಾಪ್ಟರ್‌ಗಳನ್ನು ಪಡೆದಿತ್ತು. ಇದೇ ವೇಳೆ ಇನ್ನೂ ಆರು ಹೆಲಿಕಾಪ್ಟರ್‌ಗಳಿಗಾಗಿ ಒಪ್ಪಂದ ಮಾಡಿಕೊಂಡಿತ್ತು.
* 2017ರಲ್ಲಿ ಭೂಸೇನೆಗಾಗಿ ₹4,168 ಕೋಟಿ ವೆಚ್ಚದಲ್ಲಿ ಆರು ಅಪಾಚೆ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯ ಅನುಮೋದನೆ ನೀಡಿತ್ತು.
ಬುಧವಾರ, 23 ಜುಲೈ 2025
2:02 ಅಪರಾಹ್ನ
Daily PDF
ಭಾರತೀಯ ಸೇನೆಗೆ 3 ಅಪಾಚೆ ಹೆಲಿಕಾಪ್ಟರ್‌ಗಳ ಆಗಮನ
Authored by:
Jyoti Angadi