* ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ 'ಯುನಿಫೈಡ್ ಲೆಂಡಿಂಗ್ ಇಂಟರ್‌ಫೇಸ್' (ಯುಎಲ್‌ಐ) ತಂತ್ರಜ್ಞಾನ ವೇದಿಕೆಯನ್ನು ರಾಷ್ಟ್ರದಾದ್ಯಂತ ಪರಿಚಯಿಸಲಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಆಗಸ್ಟ್ 26 ರಂದು ಘೋಷಿಸಿದರು.
* ಕಳೆದ ವರ್ಷ ಪ್ರಾಯೋಗಿಕ ಯೋಜನೆಯಾಗಿ ಪರಿಚಯಿಸಲಾದ ವೇದಿಕೆಯು “ಘರ್ಷಣೆ ರಹಿತ ಸಾಲವನ್ನು ಒದಗಿಸುವ ಗುರಿಯನ್ನು ಹೊಂದಿದೆ. ” ಮತ್ತು ಶೀಘ್ರದಲ್ಲೇ ರಾಷ್ಟ್ರವ್ಯಾಪಿ ಲಭ್ಯವಿರುತ್ತದೆ.
* ಹಣಕಾಸು ಸೇವೆಗಳ ಡಿಜಿಟಲೀಕರಣದ ಯಶಸ್ಸಿನಿಂದ ಉತ್ತೇಜಿತವಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್ ವಿಶೇಷವಾಗಿ ಸಣ್ಣ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸಾಲಗಳ ಸುಗಮ ಹರಿವನ್ನು ಖಚಿತಪಡಿಸಿಕೊಳ್ಳಲು ಏಕೀಕೃತ ಸಾಲ 'ಯುನಿಫೈಡ್ ಲೆಂಡಿಂಗ್ ಇಂಟರ್‌ಫೇಸ್' (ಯುಎಲ್‌ಐ) ಅನ್ನು ಪರಿಚಯಿಸಲಿದೆ.
* ಭಾರತದಲ್ಲಿ ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯ ನಂತರ ರಿಸರ್ವ್ ಬ್ಯಾಂಕ್ ಕೂಡ ಸಾಲಗಾರರಿಗೆ UPI ನಂತಹ ವೇದಿಕೆಯನ್ನು ಪ್ರಾರಂಭಿಸುತ್ತಿದೆ. ಇದನ್ನು ಯುನಿಫೈಡ್ ಲೆಂಡಿಂಗ್ ಇಂಟರ್ಫೇಸ್ (ULI) ಎಂದು ಹೆಸರಿಸಲಾಗಿದೆ. ಇದರಿಂದ ಸಾಲ ಪಡೆಯಲು ತುಂಬಾ ಸುಲಭವಾಗುತ್ತದೆ.
* ಕಳೆದ ವರ್ಷ ರಿಸರ್ವ್ ಬ್ಯಾಂಕ್ 2 ರಾಜ್ಯಗಳಲ್ಲಿ ಸುಲಭ ಸಾಲಗಳನ್ನು ಸಕ್ರಿಯಗೊಳಿಸುವ ತಂತ್ರಜ್ಞಾನ ವೇದಿಕೆಯ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಿತ್ತು. ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ, ಡೈರಿ ಸಾಲ, ಎಂಎಸ್‌ಎಂಇ ಸಾಲ, ವೈಯಕ್ತಿಕ ಸಾಲ ಮತ್ತು ಗೃಹ ಸಾಲದ ಮೇಲೆ ಕೇಂದ್ರೀಕೃತವಾಗಿತ್ತು. ಈ ಯೋಜನೆ ಯಶಸ್ವಿಯಾದ ನಂತರ ಇಡೀ ದೇಶದಲ್ಲಿ ಜಾರಿಯಾಗಲಿದೆ.
ಗುರುವಾರ, 29 ಆಗಸ್ಟ್ 2024
11:01 ಪೂರ್ವಾಹ್ನ
Daily PDF
ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಂದ ಹೊಸ ಸಾಲವ್ಯವಸ್ಥೆ ULI' ಜಾರಿ
Authored by:
Bhagya R K