* ಭಾರತ ರೈಲು ಉಪಕರಣಗಳ ಜಾಗತಿಕ ರಫ್ತುದಾರನಾಗಿ ವೇಗವಾಗಿ ಹೊರಹೊಮ್ಮುತ್ತಿದೆ ಎಂದು ರೈಲ್ವೆ ಇಲಾಖೆ ಘೋಷಿಸಿದೆ.
* ಬೋಗಿ, ಕೋಚ್, ಲೋಕೊಮೋಟಿವ್ಸ್ ಹಾಗೂ ಪ್ರೊಪಲ್ಷನ್ ಸಿಸ್ಟಮ್ ಸೇರಿದಂತೆ ಅನೇಕ ಉತ್ಪನ್ನಗಳು ಈಗ ವಿಶ್ವಮಟ್ಟದಲ್ಲಿ ಬಳಕೆಯಾಗುತ್ತಿವೆ.
* ಪ್ರಸ್ತುತ 16 ರಾಷ್ಟ್ರಗಳು ಭಾರತದ ರೈಲು ಉಪಕರಣಗಳನ್ನು ಆಮದು ಮಾಡುತ್ತಿವೆ. ಇದರಲ್ಲಿ ಆಸ್ಟ್ರೇಲಿಯಾ, ಕೆನಡಾ, ರಷ್ಯಾ, ಫ್ರಾನ್ಸ್, ಜರ್ಮನಿ, ಇಟಲಿ, ಮೆಕ್ಸಿಕೊ, ಸೌದಿ ಅರೇಬಿಯಾ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳಿವೆ.
* ‘ಮೇಕ್ ಇನ್ ಇಂಡಿಯಾ’ ಮತ್ತು ‘ಮೇಕ್ ಫಾರ್ ದಿ ವರ್ಲ್ಡ್’ ಅಭಿಯಾನಗಳಡಿ ಈ ರಫ್ತು ನಡೆಯುತ್ತಿದೆ.
* ಉತ್ಪನ್ನಗಳ ವಿನ್ಯಾಸ, ಅಭಿವೃದ್ಧಿ ಮತ್ತು ಪೂರೈಕೆಯಲ್ಲಿ ಭಾರತದ ಸಾಮರ್ಥ್ಯವನ್ನು ಇದು ತೋರಿಸುತ್ತದೆ.
* ಜೂನ್‌ನಲ್ಲಿ ಬಿಹಾರದ ಲೋಕೊಮೋಟಿವ್ ಘಟಕದಿಂದ ಜಿನೆವಾಗೆ ಮೊದಲ ಬಾರಿಗೆ ಲೋಕೊಮೋಟಿವ್ ರಫ್ತು ಮಾಡಲಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅದಕ್ಕೆ ಚಾಲನೆ ನೀಡಿದರು.
ಶನಿವಾರ, 04 ಅಕ್ಟೋಬರ್ 2025
11:16 ಪೂರ್ವಾಹ್ನ
Daily PDF
ಭಾರತೀಯ ರೈಲು ಉಪಕರಣಗಳಿಗೆ ಜಾಗತಿಕ ಬೇಡಿಕೆ ಹೆಚ್ಚಳ
Authored by:
Jyoti Angadi