* ಭಾರತೀಯ ನೌಕಾಪಡೆಯ ಅಧಿಕಾರಿಗಳಾದ ಲೆಫ್ಟಿನೆಂಟ್ ಕಮಾಂಡರ್ ರೂಪಾ ಮತ್ತು ದಿಲ್ಲಾ ಕೆ. ಇವರ ಸಾರಥ್ಯದ ಮಹಿಳಾ ತಂಡವು ಇದೀಗ ಸಾಗರ ಪರಿಕ್ರಮ-2ಗೆ ಸಿದ್ದವಾಗಿದೆ.
* ಇವರಿಬ್ಬರು ಭಾರತೀಯ ನೌಕಾ ನೌಕಾಯಾನ ನೌಕೆ (ಐಎನ್‌ಎಸ್‌ವಿ) ತಾರಿಣಿಯಲ್ಲಿ ಜಗತ್ತನ್ನು ಸುತ್ತುವ ಸಾಹಸವನ್ನು ಕೈಗೊಳ್ಳಲಿದ್ದಾರೆ ಎಂದು ನೌಕಾಪಡೆಯ ವಕ್ತಾರ ಕಮಾಂಡರ್ ವಿವೇಕ್ ಮಧ್ವಲ್ ತಿಳಿಸಿದ್ದಾರೆ.
* ಐಎನ್‌ಎಸ್‌ವಿ ತಾರಿಣಿ ಹಡಗಿನಲ್ಲಿ ಐತಿಹಾಸಿಕ ಸಾಗರ ಪರಿಕ್ರಮಕ್ಕೆ ಈ ತಂಡ ಸಿದ್ಧವಾಗಿದೆ. ಕಮಾಂಡರ್ ಅಭಿಲಾಷ್ ಟೋಮಿ ಅವರ ಮಾರ್ಗದರ್ಶನದಲ್ಲಿ ಕಳೆದ ಮೂರು ವರ್ಷಗಳಿಂದ ಈ ಸಾಗರ ಪರಿಕ್ರಮಕ್ಕೆ ಕಠಿಣ ತಾಲೀಮುಗಳನ್ನು ಪೂರೈಸಿರುವ ಈ ತಂಡವು ಸಾವಿರಾರು ನಾಟಿಕಲ್ ಮೈಲುಗಳನ್ನು ಕ್ರಮಿಸುವ ಗುರಿ ಹೊಂದಿದೆ.
* ಈ ಹಿಂದಿನ ಅಂದರೆ ಮೊದಲನೇ ಸಾಗರ ಪರಿಕ್ರಮದಲ್ಲಿ ಈ ತಂಡವು ಗೋವಾದಿಂದ ರಿಯೋ ಡಿ ಜನೈರೋ, ಅಲ್ಲಿಂದ ಹಿಂತಿರುಗಿ ಮತ್ತೆ ಗೋವಾದಿಂದ ಪೋರ್ಟ್‌ಪ್ಲೇರ್ ಮತ್ತು ಮಾರಿಷಸ್‌ಗೆ ಜಲಯಾತ್ರೆ ನಡೆಸಲಾಗಿತ್ತು.
* ಮೊದಲ ಸಾಗರ ಪರಿಕ್ರಮವು 2017ರ ಸೆ.10ರಿಂದ 2018ರ ಮೇ 21ರ ತನಕ ನಡೆದಿದ್ದು, ಆರು ಮಹಿಳೆಯರ ತಂಡವು 40,000 ಕಿ.ಮೀ. ದೂರ ಪ್ರಯಾಣಿಸಿತ್ತು.
* "ಭಾರತೀಯ ನೌಕಾಪಡೆಯು ನೌಕಾಯಾನ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಲು ಗಮನಾರ್ಹ ಪ್ರಯತ್ನಗಳನ್ನು ಮಾಡಿದೆ, ಕಡಲ ಪರಂಪರೆಯನ್ನು ಸಂರಕ್ಷಿಸಲು ಮತ್ತು ಸಮುದ್ರಯಾನ ಕೌಶಲ್ಯಗಳನ್ನು ಉತ್ತೇಜಿಸಲು ಅದರ ಬದ್ಧತೆಯನ್ನು ಒತ್ತಿಹೇಳುತ್ತದೆ" ಎಂದು ನೌಕಾಪಡೆಯ ವಕ್ತಾರರು ಹೇಳಿದರು.
ಭಾರತೀಯ ನೌಕಾಪಡೆಯ ಮಹಿಳಾ ಅಧಿಕಾರಿಗಳ ಸವಾಲಿನ ನೌಕಾಯಾನ ಯಾತ್ರೆಗೆ ಸಿದ್ಧತೆ
Published by Jyoti Angadi
18 ಸೆಪ್ಟೆಂಬರ್ 2024