* ಭಾರತೀಯ ನೌಕಾಪಡೆಯು ಹೆಚ್ಚುತ್ತಿರುವ ಮಿಲಿಟರಿ ಚಟುವಟಿಕೆಗಳ ನಡುವೆ ಹಿಂದೂ ಮಹಾಸಾಗರ ಪ್ರದೇಶದಲ್ಲಿ 11 ಜಲಾಂತರ್ಗಾಮಿ ನೌಕೆಗಳು, ಹಾಗೂ 35 ಯುದ್ಧನೌಕೆಗಳ ಕಾರ್ಯಚರಣೆಯ ಬೃಹತ್ ಪ್ರಮಾಣದ ಯುದ್ಧ ನೌಕೆಗಳನ್ನು ನಿಯೋಜಿಸಿದೆ.
* 10 ಯುದ್ಧನೌಕೆಗಳನ್ನು ಉತ್ತರ ಅರೇಬಿಯನ್ ಸಮುದ್ರ, ಕೆಂಪು ಸಮುದ್ರ, ಮತ್ತು ಏಡೆನ್ ಕೊಲ್ಲಿ ಮತ್ತು ಸೊಮಾಲಿಯಾದ ಪೂರ್ವ ಕರಾವಳಿಯಲ್ಲಿ ಕಡಲ್ಗಳ್ಳತನ ನಿಗ್ರಹ ಕಾರ್ಯಾಚರಣೆಗಳು ಮತ್ತು ಕ್ಷಿಪಣಿಗಳು ಮತ್ತು ಡ್ರೋನ್‌ಗಳಿಂದ ಹೊಡೆದ ಹಡಗುಗಳಿಗೆ ಪ್ರತಿಕ್ರಿಯೆಗಾಗಿ ನಿಯೋಜಿಸಿದೆ.
* ಹಿಂದೂ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಚೀನಾದ ಅಸ್ತಿತ್ವವನ್ನು ತಗ್ಗಿಸಲು ದೇಶದ ಪಶ್ಚಿಮ ಸಮುದ್ರದಲ್ಲಿ ವಾಣಿಜ್ಯ ಹಡಗುಗಳಿಗೆ ರಕ್ಷಣೆ ಒದಗಿಸಲು ಈ ನೌಕೆಗಳನ್ನು ನಿಯೋಜನೆ ಮಾಡಲಾಗಿದೆ.
* ಹಿಂದೂ ಮಹಾಸಾಗರದಲ್ಲಿ 11 ಜಲಾಂತರ್ಗಾಮಿ ನೌಕೆಗಳು, 35 ಯುದ್ಧ ನೌಕೆಗಳು ಮಾತ್ರವೇ ಅಲ್ಲದೆ ಐದು ವಿಮಾನಗಳು ಕೂಡ ಸಮುದ್ರ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತವೆ. ಈ ಪೈಕಿ 10 ಯುದ್ಧನೌಕೆಗಳು ಪಶ್ಚಿಮದ ಸಮುದ್ರದಲ್ಲಿವೆ.
* ಈ ಪ್ರದೇಶವು ವಾಣಿಜ್ಯ ಉದ್ದೇಶದ ಹಡಗುಗಳಿಗೆ ಸುರಕ್ಷಿತವಾಗುವವರೆಗೂ ನಿಯೋಜನೆ ಮುಂದುವರಿಯಲಿದೆ' ಎಂದು ನೌಕಾಪಡೆಯ ಮುಖ್ಯಸ್ಥ, ಅಡ್ಮಿರಲ್ ಆರ್. ಹರಿ ಕುಮಾರ್ ಅವರು ಮಾರ್ಚ್ 23 ರಂದು (ಶನಿವಾರ) ತಿಳಿಸಿದ್ದಾರೆ.
ಭಾರತೀಯ ನೌಕಾ ಪಡೆಯ ಹಿಂದೂ ಮಹಾಸಾಗರದಲ್ಲಿ ಬೃಹತ ನೌಕಾಪಡೆ ನಿಯೋಜನೆ
Published by Bhagya R K
25 ಮಾರ್ಚ್ 2024