* ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಚಿತ್ರದುರ್ಗದ ಚಳ್ಳಕೆರೆಯಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್ (ಎಟಿಆರ್) ನಿಂದ 'ಪುಷ್ಪಕ್' ಎಂಬ ಹೆಸರಿನ ಮರುಬಳಕೆ ಉಡಾವಣಾ ವಾಹನದ (ಆರ್‌ಎಲ್‌ವಿ) ಲ್ಯಾಂಡಿಂಗ್ ಪ್ರಯೋಗವನ್ನು ಜೂನ್ 23 ರಂದು ಯಶಸ್ವಿಗೊಳಿಸಿದೆ.
* ರಾಕೆಟ್ ಉಡಾವಣೆ ಬಳಿಕ ಸುಮಾರು 4.5 ಕಿಲೋ ಮೀಟರ್ ಎತ್ತರದಲ್ಲಿ ಹಾರಾಟ ನಡೆಸಿದ ರಾಕೆಟ್ ಸುರಕ್ಷಿತವಾಗಿ ಲ್ಯಾಂಡ್ ಆಯಿತು ಎಂದು ಇಸ್ರೋ ಮಾಹಿತಿ ಹಂಚಿಕೊಂಡಿದೆ.
* ವಾಯುಪಡೆಗೆ ಸೇರಿದ ಚಿನೂಕ್ ಯುದ್ಧ ಹೆಲಿಕಾಪ್ಟರ್‌ನ ಕೆಳಭಾಗಕ್ಕೆ ಬೃಹತ್ ರೆಕ್ಕೆಯಿರುವ 'ಪುಷ್ಪಕ್' ಉಡಾವಣಾ ವಾಹನವನ್ನು ಹಗ್ಗದಲ್ಲಿ ಕಟ್ಟಿ ಭೂಮಟ್ಟದಿಂದ 4.5 ಕಿ.ಮೀ ಮೇಲಕ್ಕೆ ಹೊತ್ತೊಯ್ಯಲಾಯಿತು.
* 4. ಕಿ.ಮೀ ಎತ್ತರದಿಂದ ರನ್‌ವೇ ಕಡೆಗೆ ಗಂಟೆಗೆ 350 ಕಿ.ಮೀ. ವೇಗದಲ್ಲಿ ಹಾರಾಟ ನಡೆಸಿದ ಪುಷ್ಪಕ್ ಸ್ವಯಂ ಚಲನೆ ಪಡೆದುಕೊಂಡಿತು. ಬ್ರೇಕ್ ಪ್ಯಾರಾಚೂಟ್, ಲ್ಯಾಂಡಿಂಗ್ ಬ್ರೇಕ್ ಮತ್ತು ನೋಸ್‌ಸ್ಟೀಲ್ ಸ್ಟೀರಿಂಗ್ ವ್ಯವಸ್ಥೆಯಿಂದ ವೇಗವನ್ನು 100 ಕಿ.ಮೀಗೆ ತಗ್ಗಿಸಿಕೊಂಡು ರನ್‌ವೇ ನ ಮಧ್ಯಭಾಗಕ್ಕೆ ಬರುತ್ತಿದ್ದಂತೆ ಸೇರಿದ್ದ ವಿಜ್ಞಾನಿಗಳು ಈ ಹಷೋದ್ಗಾರ ಮೊಳಗಿಸಿದರು.
* ಇದು ಕಡಿಮೆ ವೆಚ್ಚದಲ್ಲಿ ಮರುಬಳಕೆ ರಾಕೆಟ್‌ಗಳ ಉಡಾವಣೆಯಿಂದ ಹೆಚ್ಚಿನ ಹಣ ಉಳಿತಾಯವಾಗಲಿದೆ ಎಂಬುದು ಇಸ್ರೋ ಉದ್ದೇಶವಾಗಿದೆ.
* ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಸಂಶೋಧನಾ ಕೇಂದ್ರ, ಭಾರತೀಯ ವಾಯುಪಡೆ, ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿ- ಷ್‌ಮೆಂಟ್ (ಎಡಿಇ), ವೈಮಾನಿಕ ವಿತರಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಇಸ್ರೋದ ಸ್ಕಾಕ್, ಇಸ್ಮಾಕ್, ಸತೀಶ್ ಧವನ್ ಸ್ಪೇಸ್ ಸೆಂಟರ್ (ಎಸ್‌ಡಿಎಸ್‌ಸಿ) ಶಾರ್ ಸಂಸ್ಥೆಗಳ ಸಹಯೋಗದ ಯೋಜನೆ ಇದಾಗಿದೆ.
* ನ್ಯಾಷನಲ್ ಏರೊಸ್ಪೇಸ್ ಲ್ಯಾಬೊರೇಟರೀಸ್ (ಎನ್‌ಎಎಲ್), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ರೀಜನಲ್ ಸೆಂಟರ್ ಫಾರ್ ಮಿಲಿಟರಿ ಏರ್‌ವರ್ಥಿನೆಸ್ (ಆರ್‌ಸಿಎಂಎ), ಇಂಡಿಯನ್ ಆಯಿಲ್ ಕಾರ್ಪೊರೇಷನ್ ಆಫ್ ಇಂಡಿಯಾ, ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಸೇರಿದಂತೆ ಹಲವು ಸಂಸ್ಥೆಗಳು ಈ ಯೋಜನೆಗೆ ಕೈಜೋಡಿಸಿವೆ.
ಸೋಮವಾರ, 24 ಜೂನ್ 2024
12:55 ಅಪರಾಹ್ನ
Daily PDF
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 'ಪುಷ್ಪಕ್' ಪ್ರಯೋಗ ಯಶಸ್ವಿ
Authored by:
Bhagya R K