* ಭಾರತದಲ್ಲಿ ಮೊದಲ ಬಾರಿಗೆ ನಡೆಯುವ ಎಫ್ ಐವಿಬಿ ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್ ಷಿಪ್ ನ ಆತಿಥ್ಯಕ್ಕೆ ಹಬ್ಬಕ್ಕೆ ಬೆಂಗಳೂರು ಸಜ್ಜಾಗಿದೆ.
* ವಾಲಿಬಾಲ್ ಕೂಟದ 19 ನೇ ಆವೃತ್ತಿಯು ಕೋರಮಂಗಲ ಒಳಾಂಗಣ ಕ್ರೀಡಾಗಂಣದಲ್ಲಿ ಡಿಸೆಂಬರ್ 06 ರಂದು ಆರಂಭವಾಗಲಿದ್ದು, 2023 ರ ಪ್ರೈಮ್ ವಾಲಿಬಾಲ್ ಲೀಗ್ ನ ಚಾಂಪಿಯನ್ ತಂಡವಾದ ಅಹಮದಾಬಾದ್ ಡಿಪೆಂಡರ್ಸ್ ಈ ಕೂಟದಲ್ಲಿ ಭಾರತವನ್ನು ಪ್ರತಿನಿದಿಸಲಿದ್ದಾರೆ.
* ಈ ವಾಲಿಬಾಲ್ ಕೂಟದ 2.91 ಕೋಟಿ ಬಹುಮಾನ ಮೊತ್ತದ ಟೂರ್ನಿಯಾಗಿದೆ. ಈ ಕೂಟದಲ್ಲಿ ಒಟ್ಟು ಆರು ತಂಡಗಳಿವೆ.
* ಅಹಮದಾಬಾದ್ ಡಿಫೆಂಡರ್ಸ್ (ಭಾರತ) ತಂಡದೊಂದಿಗೆ ಹಾಲಿ ಚಾಂಪಿಯನ್ ಸರ್ ಸಿಕೋಮಾ ಪರುಗಿಯಾ (ಇಟಲಿ), ಸದಾ ಕ್ರೂರ್ಝರೊ ಪೊಲಿ ಮತ್ತು ಇಟಾಂಬೆ ಮಿನಾಸ್ ಟೆನಿಸ್ ಕ್ಲಬ್ (ಬ್ರೆಜಿಲ್), ಸುಂಟೋರಿ ಸನ್‌ಬರ್ಡ್ಸ್ ಕ್ಲಬ್ (ಜಪಾನ್) ಹಾಗೂ ಹಾಲ್ ಬ್ಯಾಂಕ್ ಸ್ಟೋರ್ ಕುಲುಬು (ಟರ್ಕಿ) ಪ್ರಶಸ್ತಿಗೆ ಪೈಪೋಟಿ ನಡೆಸಲಿವೆ.
* ಈ ಟೂರ್ನಿಯು ಡಿಸೆಂಬರ್.10ರ ವರೆಗೆ ನಡೆಯಲಿದ್ದು, ತಲಾ ಮೂರು ತಂಡಗಳ ಎರಡು ಗುಂಪುಗಳನ್ನು ರಚಿಸಲಾಗಿದ್ದು, 'ಎ' ತಂಡದಲ್ಲಿ ಡಿಫೆಂಡರ್ಸ್ ಜತೆ ಸರ್ ಸಿಕೋಮಾ ಮತ್ತು ಮಿನಾಸ್ ತಂಡವಿದೆ. ಅತಿಥೇಯ ತಂಡವು ಮೊದಲ ಲೀಗ್ ಪಂದ್ಯದಲ್ಲಿ ಇಟಾಂಬೆ ಮಿನಾಸ್ (ಡಿಸೆಂಬರ್.6) ಮತ್ತು ಎರಡನೇ ಪಂದ್ಯದಲ್ಲಿ ಸರ್ ಸಿಕೋಮಾ ತಂಡವನ್ನು ಎದುರಿಸಲಿದೆ. ಡಿಸೆಂಬರ್.9ರಂದು ಸೆಮಿಫೈನಲ್ ಪಂದ್ಯಗಳು ಮತ್ತು 10ರಂದು ಫೈನಲ್ ಹಾಗೂ ಮೂರನೇ ಸ್ಥಾನ ನಿರ್ಣಯದ ಪಂದ್ಯಗಳು ನಡೆಯಲಿವೆ.
* ಇಂದಿನ ಪಂದ್ಯಗಳು
- ಹಾಲ್ಕ್ ಬ್ಯಾಂಕ್ ಸ್ಟೋರ್- ಸುಂಟೋರಿ ಸನ್‌ಬರ್ಡ್ಸ್ (ಸಂಜೆ 5)
- ಅಹಮದಾಬಾದ್ ಡಿಫೆಂಡರ್ಸ್- ಇಟಾಂಬೆ ಮಿನಾಸ್ (ರಾತ್ರಿ 8.30)
ಬುಧವಾರ, 06 ಡಿಸೆಂಬರ್ 2023
10:41 ಪೂರ್ವಾಹ್ನ
Daily PDF
ಭಾರತದಲ್ಲಿ ಮೊದಲ ಬಾರಿಗೆ ನಡೆಯುವ ಎಫ್ ಐವಿಬಿ ವಾಲಿಬಾಲ್ ಹಬ್ಬಕ್ಕೆ ಬೆಂಗಳೂರು ಸಜ್ಜು
Authored by:
Bhagya R K