* ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವ (2)-20238 9ನೇ ಆವೃತ್ತಿಯು ಹರಿಯಾಣದ ಫರಿದಾಬಾದ್‌ನಲ್ಲಿ 2024ರ ಜನವರಿ 17ರಿಂದ 20ರವರೆಗೆ ನಡೆಯಲಿದ್ದು, 'ಅಮೃತಕಾಲದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಾರ್ವಜನಿಕರಿಗೆ ಸಂಪರ್ಕ' ಎಂಬ ಘೋಷವಾಕ್ಯದಡಿ ಐಐಎಸ್‌ಎಫ್-2023 ಅನ್ನು ಆಯೋಜಿಸಲಾಗಿದೆ.
* ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ವಿಜ್ಞಾನಿಗಳು, ಸಂಶೋಧಕರು, ಉದ್ಯಮ ವೃತ್ತಿಪರರು, ಉದ್ಯಮಿಗಳು ಹಾಗೂ ವಿಜ್ಞಾನದಲ್ಲಿ ಆಸಕ್ತಿ ಹೊಂದಿರುವವರಿಗೆ ಉತ್ತಮ ವೇದಿಕೆಯನ್ನು ಒದಗಿಸುವ ಗುರಿಯನ್ನು ಐಐಎಸ್‌ಎಫ್ ಹೊಂದಿದೆ.
* ಉತ್ಸವವು ವೈಜ್ಞಾನಿಕ ಸಾಧನೆಗಳನ್ನು ಪ್ರದರ್ಶಿ ಸುವ 17 ಥೀಮ್‌ಗಳನ್ನು ಒಳಗೊಂಡಿರುತ್ತದೆ. ಇದು ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ವೈವಿಧ್ಯಮಯ ಪ್ರಯೋಜನಗಳನ್ನು ಒದಗಿಸುತ್ತದೆ. * ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ತಜ್ಞರು ಸೆಮಿನಾರ್‌ಗಳನ್ನು ನೀಡಲಿದ್ದು, ಸಂವಾದ, ಪ್ರದರ್ಶನ, ಸ್ಪರ್ಧೆಗಳು, ಕಾರ್ಯಗಾರಗಳು, ತಂತ್ರಜ್ಞಾನ ಪ್ರದರ್ಶನವನ್ನು ಮಾಡಲಾಗುತ್ತದೆ.
ಭಾರತದಲ್ಲಿ ಜನವರಿ 17ರಿಂದ ಮೂರು ದಿನ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವ
Published by Tajabi Pathan
20 ನವೆಂಬರ್ 2023