* ಅಮೆರಿಕಾದ ಟೆಕ್ ದೈತ್ಯ ಗೂಗಲ್ ಕಂಪನಿಯು ಭಾರತದಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ 'ಗೂಗಲ್ ವ್ಯಾಲೆಟ್' (Google Wallet) ಸೇವೆಗಳನ್ನು ಪ್ರಾರಂಭಿಸಿದೆ.
* 'Google Pay app'ಭಿನ್ನವಾಗಿರುವ "ಗೂಗಲ್ ವಾಲೆಟ್" ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಲಾಯಲ್ಟಿ ಕಾರ್ಡ್, ಗಿಫ್ಟ್ ಕಾರ್ಡ್ ಸೇರಿದಂತೆ ಇತರೆ ಡಿಜಿಟಲ್ ಕಾರ್ಡ್‌ಗಳನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳಬಹುದಾಗಿದೆ.
* Google 2022 ರಲ್ಲಿ ಅಮೇರಿಕಾದಲ್ಲಿ ಡಿಜಿಟಲ್ ವ್ಯಾಲೆಟ್ ಅಪ್ಲಿಕೇಶನ್ Google Wallet ಅನ್ನು ಪ್ರಾರಂಭಿಸಿದ್ದು, ಆಂಡ್ರಾಯ್ಡ್ ಬಳಕೆದಾರರು ಇದೀಗ ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ ಎಂದು ಕಂಪನಿಯು ತಿಳಿಸಿದೆ.
* ಈ ಹೊಸ ಸೇವೆಗಾಗಿ ಏರ್ ಇಂಡಿಯಾ, ಇಂಡಿಗೊ, ಪ್ಲಿಪ್‌ಕಾರ್ಟ್, ಪೈನ್ ಲ್ಯಾಬ್, ಕೊಚ್ಚಿ ಮೆಟ್ರೊ, ಪಿವಿಆರ್ ಮತ್ತು ಐನಾಕ್ಸ್ ಸೇರಿ 20 ಸಂಸ್ಥೆಗಳ ಸಹಯೋಗದೊಂದಿಗೆ ಪಾಲುದಾರಿಕೆ ಮಾಡಿ ಕೊಳ್ಳಲಾಗಿದೆ.
* Google Wallet ವೆಬ್‌ಸೈಟ್‌ನಲ್ಲಿನ ಪ್ರಕಾರ Google Wallet ಎಂಬುದು 'ಸುರಕ್ಷಿತ ಮತ್ತು ಖಾಸಗಿ ಡಿಜಿಟಲ್ ವ್ಯಾಲೆಟ್' ಆಗಿದ್ದು ಅದು ಬಳಕೆದಾರರಿಗೆ ಲಾಯಲ್ಟಿ ಕಾರ್ಡ್‌ಗಳಿಗೆ ತ್ವರಿತ ಪ್ರವೇಶ ಒದಗಿಸುತ್ತದೆ.
* ಬಳಕೆದಾರರು ಸಿನಿಮಾ, ಈವೆಂಟ್ ಟಿಕೆಟ್, ಬೋರ್ಡಿಂಗ್ ಪಾಸ್, ಸಾರ್ವಜನಿಕ ಸಾರಿಗೆ ಪಾಸ್, ಗಿಫ್ಟ್ ಕಾರ್ಡ್ ಸೇರಿದಂತೆ ಎಲ್ಲವನ್ನು ಗೂಗಲ್ ವಾಲೆಟ್ನಲ್ಲಿ ಸುರಕ್ಷಿತವಾಗಿಡಬಹುದು.
* Google Wallet ಸೇವೆಗಳು Google Pay ಗಿಂತ ಸಂಪೂರ್ಣವಾಗಿ ಭಿನ್ನವಾಗಿದ್ದು, ಇದು ಅತ್ಯಂತ ಸುರಕ್ಷಿತ ಮತ್ತು ಖಾಸಗಿ ಡಿಜಿಟಲ್ ವ್ಯಾಲೆಟ್ ಆಗಿದ್ದು, ಪ್ರಸ್ತುತ ಗೂಗಲ್ ವಾಲೆಟ್ 80 ಕ್ಕೂ ಹೆಚ್ಚು ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಭಾರತದಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ ವಾಲೆಟ್ ಸೇವೆ ಲಭ್ಯ
Published by Bhagya R K
09 ಮೇ 2024