* ಅಮೆರಿಕನು ನಾಲ್ಕನೇ ವರ್ಷಕ್ಕೂ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿ ಮುಂದುವರಿದಿದೆ.
* 2024–25ನೇ ಆರ್ಥಿಕ ವರ್ಷದಲ್ಲಿ ಭಾರತ ಹಾಗೂ ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರದ ಒಟ್ಟು ಮೌಲ್ಯ ₹11.28 ಲಕ್ಷ ಕೋಟಿಗೆ ತಲುಪಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ.
* ಈ ಅವಧಿಯಲ್ಲೇ ಚೀನಾದೊಂದಿಗೆ ಭಾರತಕ್ಕಿರುವ ವ್ಯಾಪಾರ ಅಂತರ ₹8.49 ಲಕ್ಷ ಕೋಟಿ ಆಗಿದೆ; ಅಂದರೆ ಭಾರತ ರಫ್ತು ಮಾಡುವ ಮೌಲ್ಯಕ್ಕಿಂತ ಚೀನಾದಿಂದ ಆಮದು ಮಾಡಿಕೊಳ್ಳುವ ಮೌಲ್ಯ ಹೆಚ್ಚು.
* ಭಾರತ ಅಮೆರಿಕಕ್ಕೆ ಔಷಧಿಗಳು, ಅಮೂಲ್ಯ ರತ್ನಗಳು, ಪೆಟ್ರೋಲಿಯಂ ಉತ್ಪನ್ನಗಳು, ಚಿನ್ನಾಭರಣಗಳು, ಸಿದ್ಧ ಉಡುಪುಗಳು, ಕಬ್ಬಿಣ ಮತ್ತು ಉಕ್ಕು, ಎಲೆಕ್ಟ್ರಾನಿಕ್ ಉಪಕರಣಗಳನ್ನು ರಫ್ತು ಮಾಡುತ್ತಿದೆ.
* ಅಮೆರಿಕದಿಂದ ಭಾರತ ಕಚ್ಚಾ ತೈಲ, ಪೆಟ್ರೋಲಿಯಂ ಉತ್ಪನ್ನಗಳು, ಕಲ್ಲಿದ್ದಲು, ಕತ್ತರಿಸಿ ಪಾಲಿಶ್ ಮಾಡಿದ ವಜ್ರಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಏರ್‌ಕ್ರಾಫ್ಟ್, ಸ್ಪೇಸ್‌ಕ್ರಾಫ್ಟ್ ಮತ್ತು ಅವುಗಳ ಭಾಗಗಳು, ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದೆ.
ಭಾರತದ ವ್ಯಾಪಾರ ಪಾಲುದಾರನಾಗಿ ಅಮೆರಿಕ ಸತತ ನಾಲ್ಕನೇ ವರ್ಷವೂ ಮುನ್ನಡೆ
Published by Jyoti Angadi
17 ಏಪ್ರಿಲ್ 2025