* ಭಾರತದ ಟಾಟಾ ಸಮೂಹವು ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಭಾರತದಿಂದ ಐಫೋನ್‌ಗಳನ್ನು ತಯಾರಿಸಲು ಪ್ರಾರಂಭಿಸಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
* ಆ್ಯಪಲ್ ಇಂಕ್ನ (Apple Inc) ಐಫೋನ್ ಅನ್ನು ಬೆಂಗಳೂರಿನಲ್ಲಿ (Bangalore) ತಯಾರಿಸುವ ತೈವಾನ್ನ ತೈಪೆಯಿಯ (Taipei) ವಿಸ್ಟ್ರಾನ್ (Wistron Corp) ಕಂಪನಿಯ ಘಟಕವನ್ನು ಖರೀದಿಸಲು ಟಾಟಾ ಸಮೂಹ (Tata Group) ಒಪ್ಪಂದ ಮಾಡಿಕೊಂಡಿದೆ.
* ವಿವಿಧ ಸಹಭಾಗಿತ್ವ ಯೋಜನೆಗಳ ಬಗ್ಗೆ ಎರಡೂ ಕಂಪನಿಗಳು ಸಮಾಲೋಚನೆ ನಡೆಸಿವೆ. ಅದರಂತೆ, ವಿಸ್ಟ್ರಾನ್ನ ಬೆಂಗಳೂರು ಘಟಕದ ಹೆಚ್ಚು ಪಾಲನ್ನು ವಹಿಸಿಕೊಳ್ಳುವ ಬಗ್ಗೆ ಟಾಟಾ ಸಮೂಹ ಒಲವು ವ್ಯಕ್ತಪಡಿಸಿದೆ. ವಿಸ್ಟ್ರಾನ್ ಬೆಂಬಲದೊಂದಿಗೆ ಉತ್ಪಾದನೆ ಕಾರ್ಯಾಚರಣೆ ಆರಂಭಿಸಲು ಟಾಟಾ ಉತ್ಸುಕವಾಗಿದೆ ಎಂದು ಮೂಲಗಳು ಹೇಳಿವೆ.
ಭಾರತದ ಟಾಟಾ ಸಮೂಹದಿಂದ ಐಫೋನ್ ತಯಾರಿ
Published by Tajabi Pathan
31 ಅಕ್ಟೋಬರ್ 2023