* ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರನ್ನು 2026 ರ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ಮತ್ತು ಚುನಾವಣಾ ಸಹಾಯ ಸಂಸ್ಥೆ (International IDEA) ಯ ಹೊಸ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಈ ಮಹತ್ವದ ಘೋಷಣೆಯನ್ನು ಭಾರತದ ಚುನಾವಣಾ ಆಯೋಗ ಅಧಿಕೃತವಾಗಿ ಪ್ರಕಟಿಸಿದೆ.
* ಡಿಸೆಂಬರ್ 3, 2026 ರಂದು ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ IDEA ಸದಸ್ಯ ರಾಷ್ಟ್ರಗಳ ಮಂಡಳಿ ಸಭೆಯಲ್ಲಿ ಅವರು ಅಧಿಕೃತವಾಗಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲಿದ್ದಾರೆ.
* International IDEA ಒಂದು ಜಾಗತಿಕ ಸಂಸ್ಥೆಯಾಗಿದ್ದು, ವಿಶ್ವದಾದ್ಯಂತ ಸ್ಥಿರ, ಪಾರದರ್ಶಕ ಮತ್ತು ಒಳಗೊಳ್ಳುವಂತ ಪ್ರಜಾಪ್ರಭುತ್ವ ವ್ಯವಸ್ಥೆಗಳನ್ನು ಬಲಪಡಿಸುವ ಗುರಿ ಹೊಂದಿದೆ. ಈ ಸಂಸ್ಥೆಗೆ ಪ್ರಸ್ತುತ 35 ಸದಸ್ಯ ರಾಷ್ಟ್ರಗಳ ಸದಸ್ಯತ್ವವಿದೆ ಅಮೆರಿಕಾ ಮತ್ತು ಜಪಾನ್ ವೀಕ್ಷಕ ರಾಷ್ಟ್ರಗಳಾಗಿವೆ.
* ಭಾರತವು International IDEA ಯ ಸ್ಥಾಪಕ ಸದಸ್ಯ ರಾಷ್ಟ್ರವಾಗಿದ್ದು, ಹಲವು ವರ್ಷಗಳಿಂದ ಈ ಜಾಗತಿಕ ಸಂಸ್ಥೆಯ ಆಡಳಿತ ಮತ್ತು ಪ್ರಜಾಪ್ರಭುತ್ವ ಸಂವಾದಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದೆ.
ಜ್ಞಾನೇಶ್ ಕುಮಾರ್ ಅವರ ಅಧ್ಯಕ್ಷತೆ: ಭಾರತವನ್ನು ಜಾಗತಿಕ ಚುನಾವಣಾ ಸುಧಾರಣೆಗಳಲ್ಲಿ ಪ್ರಮುಖ ನಾಯಕತ್ವದಲ್ಲಿ ನಿಲ್ಲಿಸುತ್ತದೆ. ಭಾರತೀಯ ಚುನಾವಣಾ ವ್ಯವಸ್ಥೆಯ ಪಾರದರ್ಶಕತೆ ಮತ್ತು ತಂತ್ರಜ್ಞಾನ ಬಳಕೆಯ ಯಶಸ್ಸನ್ನು ಜಾಗತಿಕ ವೇದಿಕೆಯಲ್ಲಿ ಹಂಚಲು ಅವಕಾಶವನ್ನು ಒದಗಿಸುತ್ತದೆ ಹಾಗೂ ವಿಶ್ವದ ಚುನಾವಣಾ ಚಟುವಟಿಕೆಗಳಲ್ಲಿ ಭಾರತ–ಕೇಂದ್ರಿತ ತಜ್ಞತೆಯನ್ನು ಹೆಚ್ಚಿಸುತ್ತದೆ.
ಗುರುವಾರ, 27 ನವೆಂಬರ್ 2025
1:20 ಅಪರಾಹ್ನ
Daily PDF
ಭಾರತದ ಸಿಇಸಿ ಜ್ಞಾನೇಶ್ ಕುಮಾರ್ – ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ವೇದಿಕೆಯ ಹೊಸ ಅಧ್ಯಕ್ಷ
Authored by:
Akshata Halli