* ದೇಶದ ರಕ್ಷಣಾ ರಫ್ತು ಇದೇ ಮೊದಲ ಬಾರಿಗೆ ರೂ.21,000 ಕೋಟಿ ಗಡಿ ದಾಟಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಿಳಿಸಿದ್ದಾರೆ. ಇದು ಹಿಂದಿನ ಹಣಕಾಸು ವರ್ಷಕ್ಕಿಂತ 32.5% ರಷ್ಟು ಹೆಚ್ಚಿಗೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
* 2023-24 ರ ಹಣಕಾಸು ವರ್ಷದಲ್ಲಿ (ಎಫ್ ವೈ) ರಕ್ಷಣಾ ರಫ್ತು ದಾಖಲೆಯ ರೂ.21,083 ಕೋಟಿಗಳನ್ನು (ಸರಿಸುಮಾರು. US$ 2.63 ಶತಕೋಟಿ) ತಲುಪಿದೆ. ಕಳೆದ ಹಣಕಾಸು ವರ್ಷದಲ್ಲಿ ಈ ಅಂಕಿ ಅಂಶವು ರೂ.15,920 ಕೋಟಿ ಇದ್ದಾಗ 32.5% ರಷ್ಟು ಬೆಳವಣಿಗೆಯಾಗಿದೆ.
* ಭಾರತವು 2024-25ರ ವೇಳೆಗೆ ರೂ.35,000 ಕೋಟಿ ರಕ್ಷಣಾ ರಫ್ತು ಗುರಿಯನ್ನು ಹೊಂದಿದೆ. ದೇಶವು ಪ್ರಸ್ತುತ 85 ದೇಶಗಳಿಗೆ ಮಿಲಿಟರಿ ಸಾಮಗ್ರಿಗಳು ರಫ್ತು ಮಾಡುತ್ತಿದೆ.
* ಇದು ಕ್ಷಿಪಣಿಗಳು, ಫಿರಂಗಿ ಬಂದೂಕುಗಳು, ರಾಕೆಟ್ ಗಳು, ಶಸ್ತ್ರಸಜ್ಜಿತ ವಾಹನಗಳು, ವೈಯಕ್ತಿಕ ರಕ್ಷಣಾ ಸಾಧನಗಳು, ವಿವಿಧ ರಾಡಾರ್ ಗಳು, ಕಣ್ಗಾವಲು ವ್ಯವಸ್ಥೆಗಳು ಮತ್ತು ಯುದ್ಧಸಾಮಗ್ರಿಗಳನ್ನು ಒಳಗೊಂಡಿದೆ.
* ಭಾರತ ಶಸ್ತ್ರಾಸ್ತ್ರ ಆಮದಿನಲ್ಲೂ ಮುಂಚೂಣಿಯಲ್ಲಿದ್ದು, ಜಗತ್ತಿನಲ್ಲೇ ಅತಿ ಹೆಚ್ಚು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಭಾರತ ಮೊದಲ ಸಾಲಿನಲ್ಲಿದೆ.
ಮಂಗಳವಾರ, 02 ಎಪ್ರಿಲ್ 2024
4:47 ಅಪರಾಹ್ನ
Daily PDF
ಭಾರತದ ರಕ್ಷಣಾ ಸಾಮಗ್ರಿಗಳ ರಫ್ತಿನಲ್ಲಿ ಅಭೂತಪೂರ್ವ ಸಾಧನೆ!
Authored by:
Akshata Halli