* 2024-25 ಆರ್ಥಿಕ ವರ್ಷದಲ್ಲಿ ಭಾರತದ ರಕ್ಷಣಾ ರಫ್ತು ಮೊತ್ತ 23,622 ಕೋಟಿ ರೂ.ಗಳಿಗೆ ಏರಿಕೆಯಾಗಿದೆ.
* ಹಿಂದಿನ ಆರ್ಥಿಕ ವರ್ಷದೊಂದಿಗೆ ಹೋಲಿಸಿದರೆ ಶೇ.12.04ರಷ್ಟು ಬೆಳವಣಿಗೆ ನಡೆದಿದೆ.
* 2029ರ ವೇಳೆಗೆ ರಕ್ಷಣಾ ರಫ್ತನ್ನು 50,000 ಕೋಟಿ ರೂ.ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ.
* ರಕ್ಷಣಾ ಸಾರ್ವಜನಿಕ ವಲಯದ ಕಂಪನಿಗಳಿಂದ 15,233 ಕೋಟಿ ರೂ. (ಶೇ.42.85) ರಫ್ತು ಆದಾಯವಾಗಿದೆ.
* ಖಾಸಗಿ ವಲಯದ ಕಂಪನಿಗಳಿಂದ 8,389 ಕೋಟಿ ರೂ. ಆದಾಯ ಬಂದಿದೆ.
* ಭಾರತವು ಸ್ವದೇಶಿ ಮಿಲಿಟರಿ ಉಪಕರಣಗಳ ತಯಾರಿಕೆಗೆ ಆದ್ಯತೆ ನೀಡಿದ್ದು, ಈವರೆಗೆ 80 ದೇಶಗಳಿಗೆ ರಕ್ಷಣಾ ಸಾಮಗ್ರಿ ರಫ್ತು ಮಾಡಲಾಗಿದೆ.
* ರಕ್ಷಣಾ ಉದ್ಯಮವನ್ನು ಉತ್ತೇಜಿಸಲು ಪರವಾನಗಿ ಕಾರ್ಯವಿಧಾನ ಸರಳೀಕರಣ, ಅವಧಿ ವಿಸ್ತರಣೆ ಮೊದಲಾದ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.
ಗುರುವಾರ, 10 ಎಪ್ರಿಲ್ 2025
4:38 ಅಪರಾಹ್ನ
Daily PDF
ಭಾರತದ ರಕ್ಷಣಾ ರಫ್ತು ₹23,622 ಕೋಟಿ ರೂ.ಗೆ ಏರಿಕೆ
Authored by:
Jyoti Angadi