* 10 ವರ್ಷಗಳ ಹಿಂದೆ ಸುಮಾರು 2,000 ಕೋಟಿ ರೂ. ಗಳಷ್ಟಿದ್ದ ನಮ್ಮ ರಕ್ಷಣಾ ರಫ್ತು ಈಗ ದಾಖಲೆಯ 21,000 ಕೋಟಿ ರೂ. ಗಳನ್ನು ದಾಟಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
* ಎರಡು ಶತಮಾನಗಳಿಗೂ ಹೆಚ್ಚು ಹಳೆಯದಾದ ಮೌ ಕಂಟೋನ್ಮೆಂಟ್‌ನಲ್ಲಿರುವ ಆರ್ಮಿ ವಾರ್ ಕಾಲೇಜ್ (ಎಡಬ್ಲ್ಯೂಸಿ) ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸಿಂಗ್ 2029ರ ವೇಳೆಗೆ ನಾವು 50,000 ಕೋಟಿ ರೂ. ಮೊತ್ತದ ರಫ್ತನ್ನು ಸಾಧಿಸುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
* ಭವಿಷ್ಯದ ಸವಾಲುಗಳನ್ನು ಎದುರಿಸಲು ಸೈನಿಕರನ್ನು ಸಜ್ಜುಗೊಳಿಸುವಲ್ಲಿ ಸೇನಾ ತರಬೇತಿ ಕೇಂದ್ರಗಳ ಪಾತ್ರ ಮಹತ್ವದ್ದಾಗಿದೆ. ಭಾರತದಲ್ಲಿ ತಯಾರಾಗುತ್ತಿರುವ ಉಪಕರಣಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
* ಬದಲಾಗುತ್ತಿರುವ ಯುದ್ಧದ ಸ್ವರೂಪಗಳ ಕುರಿತು ಪ್ರತಿಕ್ರಿಯಿಸಿರುವ ಸಿಂಗ್ ಕೃತಕ ಬುದ್ಧಿಮತ್ತೆ ಆಧರಿತ ಯುದ್ಧ, ಪರೋಕ್ಷ ಯುದ್ಧ ಹಾಗೂ ಸೈಬರ್ ದಾಳಿಗಳು ಸೇರಿದಂತೆ ಅನೇಕ ಅಸಾಂಪ್ರದಾಯಿಕ ವಿಧಾನಗಳು ದೊಡ್ಡ ಸವಾಲುಗಳನ್ನು ಒಡ್ಡುತ್ತಿವೆ ಎಂದು ತಿಳಿಸಿದ್ದಾರೆ.
* ಮೂರು ಸೇವೆಗಳ ನಡುವೆ ಏಕೀಕರಣ ಮತ್ತು ಜಂಟಿಯನ್ನು ಬಲಪಡಿಸಲು ಮೋದಿ ಸರ್ಕಾರ ಬದ್ಧವಾಗಿದೆ ಎಂದು ರಕ್ಷಣಾ ಸಚಿವರು ಹೇಳಿದರು. "ಮುಂಬರುವ ದಿನಗಳಲ್ಲಿ, ಸಶಸ್ತ್ರ ಪಡೆಗಳು ಉತ್ತಮ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ" ಎಂದು ಸಿಂಗ್ ತಿಳಿದರು.
ಭಾರತದ ದಾಖಲೆಯ ರಕ್ಷಣಾ ರಫ್ತು: ರಾಜನಾಥ್ ಸಿಂಗ್
Published by Jyoti Angadi
02 ಜನವರಿ 2025