* ಭಾರತೀಯ ರಿಸರ್ವ್ ಬ್ಯಾಂಕ್(RBI) ಭಾರತದ ಹಣ ರವಾನೆ ಸಮೀಕ್ಷೆಯ(India's Remittances Survey 2023-24) ಆರನೇ ಸುತ್ತಿನ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ,
* ಮಾರ್ಚ್‌ನಲ್ಲಿ ಆರ್‌ಬಿಐನ ನಡೆಸಿದ ಭಾರತದ ಹಣ ರವಾನೆ ಸಮೀಕ್ಷೆಯ ಒಳನೋಟಗಳು’ ಎಂಬ ಶೀರ್ಷಿಕೆಯ ಪ್ರಬಂಧವು ಭಾರತದ ಒಟ್ಟು ಹಣ ರವಾನೆ ದ್ವಿಗುಣಗೊಂಡಿದೆ ಎಂದು ಹೇಳಿದೆ.
* ಈ ಸಮೀಕ್ಷೆಯ ಪ್ರಕಾರ ಈಗ ಯುಎಸ್ ಮತ್ತು ಯುಕೆ ದೇಶಗಳು ಭಾರತಕ್ಕೆ ಹಣಕಾಸು ವರ್ಗಾವಣೆ ಮಾಡುವ ಪ್ರಮುಖ ಮೂಲ ರಾಷ್ಟ್ರಗಳಾಗಿವೆ.
* 2010-11ರಲ್ಲಿ $55.6 ಬಿಲಿಯನ್ ಆಗಿದ್ದ ಒಟ್ಟಾರೆ ಹಣಕಾಸು ವರ್ಗಾವಣೆಗಳು 2023-24ರಲ್ಲಿ $118.7 ಬಿಲಿಯನ್‌ಗೆ ಏರಿವೆ. 2029ರ ಹೊತ್ತಿಗೆ ಈ ಮೊತ್ತವು $160 ಬಿಲಿಯನ್ ತಲುಪಬಹುದು ಎಂದು ಆರ್‌ಬಿಐ ಅಂದಾಜಿಸಿದೆ.
* ಅಮೆರಿಕಾ ಮತ್ತು ಯುಕೆ ದೇಶಗಳಿಂದ ಹಣಕಾಸು ವರ್ಗಾವಣೆ FY24ರಲ್ಲಿ 40%ಕ್ಕೆ ಏರಿದ್ದು, FY17ರಲ್ಲಿ ಇದು ಕೇವಲ 26% ಆಗಿತ್ತು.
* ಯುಎಸ್ 2021ರಿಂದಲೇ ಪ್ರಮುಖ ಮೂಲ ರಾಷ್ಟ್ರವಾಗಿದ್ದು, FY24ರಲ್ಲಿ 28% ಹಣಕಾಸು ವರ್ಗಾವಣೆ ಮಾಡಿದೆ. ಸಿಂಗಪುರ್ ಮತ್ತು ಆಸ್ಟ್ರೇಲಿಯಾ ಕೂಡಾ ಪ್ರಮುಖ ಪಂಗಡದಲ್ಲಿ ಸೇರಿದ್ದು, ಯುಎಇ ಮತ್ತು ಸೌದಿ ಅರೇಬಿಯಾದಿಂದ ಹಣಕಾಸು ವರ್ಗಾವಣೆ ಶೇ.27% (FY17) ರಿಂದ ಶೇ.19.2% (FY24) ಮತ್ತು ಶೇ.11.6% ರಿಂದ ಶೇ.6.7% ಗೆ ಕುಸಿದಿದೆ.
* ಒಟ್ಟಾರೆಯಾಗಿ, ಜಿಸಿಸಿ ರಾಷ್ಟ್ರಗಳಿಂದ ಹಣಕಾಸು ವರ್ಗಾವಣೆ 2016-17ರಲ್ಲಿ 47% ಇತ್ತು, ಆದರೆ 2023-24ರಲ್ಲಿ ಅದು 38% ಆಗಿದೆ.
* ಈ ಸಮೀಕ್ಷೆ ವಲಸೆ ಪ್ರವೃತ್ತಿಯಲ್ಲಿನ ಬದಲಾವಣೆಯನ್ನು ಬಹಿರಂಗಪಡಿಸಿದೆ. ಹೆಚ್ಚು ನುರಿತ ವೃತ್ತಿಪರರು ವಲಸೆ ಹೋಗುತ್ತಿದ್ದಾರೆ, ಇದು ಮುಂದುವರಿದ ಆರ್ಥಿಕತೆಗಳಿಂದ ಹಣ ರವಾನೆಯಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ, ಇದು ಗಲ್ಫ್ ರಾಷ್ಟ್ರಗಳಿಂದ ಬರುವ ಒಳಹರಿವನ್ನು ಮೀರಿಸುತ್ತದೆ.
ಭಾರತದ ಅತಿ ದೊಡ್ಡ ಹಣ ರವಾನೆ ಮೂಲವಾಗಿ ಅಮೆರಿಕ
Published by Jyoti Angadi
24 ಮಾರ್ಚ್ 2025