* ಎಸ್‌ಬಿಐನ ಇತ್ತೀಚಿನ ವರದಿಯ ಪ್ರಕಾರ, ಸರ್ಕಾರದ ಕ್ರಮಗಳಿಂದ ಭಾರತದಲ್ಲಿ ಅರಣ್ಯ ವ್ಯಾಪ್ತಿ ಗಣನೀಯವಾಗಿ ಹೆಚ್ಚಾಗಿದೆ.
* ಇದರ ಪರಿಣಾಮವಾಗಿ ಭಾರತ ಹೆಚ್ಚು ಅರಣ್ಯ ಹೊಂದಿರುವ ಹತ್ತು ಪ್ರಮುಖ ದೇಶಗಳಲ್ಲಿ ಸ್ಥಾನ ಪಡೆದಿದೆ.
* ನಗರೀಕರಣದ ನಡುವೆಯೂ ನಗರ ಹಸಿರೀಕರಣ ಮತ್ತು ಭೂ-ಬಳಕೆ ಯೋಜನೆಗಳಿಂದಾಗಿ ಈ ಏರಿಕೆ ಸಂಭವಿಸಿದೆ.
* ಪ್ರಸ್ತುತ ಭಾರತದಲ್ಲಿನ ಮಹಾನಗರಗಳಲ್ಲಿ 511.81 ಕಿ.ಮೀ ಅರಣ್ಯವಿದ್ದು, ಇದು ಶೇ.10.26ರಷ್ಟು ಪ್ರದೇಶವನ್ನೊಳಗೊಂಡಿದೆ. ದಿಲ್ಲಿ ಅತಿಹೆಚ್ಚು ಅರಣ್ಯ ಹೊಂದಿದ್ದರೆ, ಮುಂಬಯಿ ಹಾಗೂ ಬೆಂಗಳೂರು ನಂತರ ಸ್ಥಾನದಲ್ಲಿವೆ.
* ಅಹಮದಾಬಾದ್‌ನಲ್ಲಿ 2021ರಿಂದ 2023ರವರೆಗೆ ಅರಣ್ಯ ವ್ಯಾಪ್ತಿಯಲ್ಲಿ ಗರಿಷ್ಠ ಏರಿಕೆ ಕಂಡುಬಂದಿದೆ.
* ಅರಣ್ಯ ವಲಯದ ಈ ಬೆಳವಣಿಗೆ ಕಾಗದ ತಯಾರಿ ಮತ್ತು ಪೀಠೋಪಕರಣ ಕೈಗಾರಿಕೆಗಳಿಗೆ ಬೆಂಬಲ ನೀಡುತ್ತಿದೆ. ಒಡಿಶಾ, ಮಿಜೋರಾಂ, ಜಾರ್ಖಂಡ್ ಮತ್ತು ಈಶಾನ್ಯ ರಾಜ್ಯಗಳಲ್ಲಿ ಅರಣ್ಯ ಹೆಚ್ಚಾಗುತ್ತಿದೆ.
* ಆದರೆ ಯುಪಿ, ಬಿಹಾರ, ಹರಿಯಾಣ ಮುಂತಾದ ರಾಜ್ಯಗಳಲ್ಲಿ ಅರಣ್ಯ ವ್ಯಾಪ್ತಿ ಶೇ.10ಕ್ಕಿಂತ ಕಡಿಮೆ ಇದೆ.
* ಶಹರೀ ಜನಸಂಖ್ಯೆ ಏರಿಕೆಯಿಂದ ಅರಣ್ಯ ವ್ಯಾಪ್ತಿಯ ಮೇಲೂ ಪ್ರಭಾವ ಬೀರುತ್ತಿದ್ದು, ಸ್ಮಾರ್ಟ್ ಸಿಟೀಸ್ ಮತ್ತು ಅಟಲ್ ಮಿಷನ್ ಯೋಜನೆಗಳಂತಹ ಹಸಿರು ಮೂಲಸೌಕರ್ಯ ಯೋಜನೆಗಳು ಅಗತ್ಯವೆಂದು ವರದಿ ಸೂಚಿಸಿದೆ.
ಭಾರತದ ಅರಣ್ಯ ವ್ಯಾಪ್ತಿಯಲ್ಲಿ ಏರಿಕೆ
Published by Jyoti Angadi
20 ಮೇ 2025