* ಇಂದಿನಿಂದ (ಜನವರಿ 13) ಆರಂಭವಾಗುವ ಭಾರತ ಆತಿಥ್ಯ ವಹಿಸಿರುವ ಚೊಚ್ಚಲ ಕೊಕ್ಕೊ ವಿಶ್ವಕಪ್ ಟೂರ್ನಿಗೆ ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣವು ಸಂಪೂರ್ಣ ಸಜ್ಜಾಗಿದೆ.
* ಪುರುಷ ಮತ್ತು ಮಹಿಳೆ ವಿಭಾಗಗಳಲ್ಲಿ ಒಟ್ಟು 23 ತಂಡಗಳು ಭಾಗವಹಿಸುತ್ತಿದ್ದು, ಇದೇ ತಿಂಗಳ 19 ರಂದು ಫೈನಲ್ ನಡೆಯಲಿದೆ.
* ಆತಿಥೇಯ ಭಾರತ ಪುರುಷರ ತಂಡ ಇಂದು ನೇಪಾಳ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದೆ.
* ಭಾರತ, ನೇಪಾಳ, ಪೆರು, ಬ್ರೆಜಿಲ್ ಮತ್ತು ಭೂತಾನ್ ತಂಡಗಳು ಎ ಗುಂಪಿನಲ್ಲಿದ್ದು, ಲೀಗ್ ಹಂತದ ಪಂದ್ಯಗಳು ಜ.16ಕ್ಕೆ ಮುಕ್ತಾಯಗೊಳ್ಳುತ್ತವೆ. 17ರಿಂದ ಪ್ಲೇ ಆಫ್ ಹಂತದ ಸ್ಪರ್ಧೆಗಳು ಆರಂಭವಾಗಲಿವೆ.
* ಭಾರತ ಮಹಿಳೆಯರ ತಂಡವು 14ರಂದು ದಕ್ಷಿಣ ಕೊರಿಯಾ ವಿರುದ್ಧ ಅಭಿಯಾನವನ್ನು ಆರಂಭಿಸಲಿದೆ. ಭಾರತವು ಎ ಗುಂಪಿನಲ್ಲಿ ಸೇರಿದ್ದು, ಅದರಲ್ಲಿವೆ ನಾಲ್ಕು ತಂಡಗಳು, ಹಾಗೂ ಉಳಿದ ಗುಂಪುಗಳಲ್ಲಿ ಐದು ತಂಡಗಳಿವೆ.
ಸೋಮವಾರ, 13 ಜನವರಿ 2025
11:24 ಪೂರ್ವಾಹ್ನ
Daily PDF
ಭಾರತದ ಆತಿಥ್ಯ ವಹಿಸಿರುವ ಮೊದಲ ಕೊಕ್ಕೊ ವಿಶ್ವಕಪ್ಗೆ ಚಾಲನೆ
Authored by:
Jyoti Angadi