* ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಭಾರತದ ಪ್ರತಿನಿಧಿಯಾಗಿ ಅವಿರೋಧವಾಗಿ ಆಯ್ಕೆಯಾದ ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ಶ್ರೀಮತಿ ನೀತಾ ಅಂಬಾನಿ ಅವರು ಭಾರತದ 2036ರ ಒಲಿಂಪಿಕ್ಸ್ ಆತಿಥ್ಯಕ್ಕೆ ಇನ್ಫ್ಲುಯೆನ್ಸಿಲ್ ಅಂಬಾಸಿಡರ್ (ಪ್ರಭಾವಿ ರಾಯಭಾರಿ) ಆಗಲಿದ್ದಾರೆ.
* ಶ್ರೀಮತಿ ನೀತಾ ಅಂಬಾನಿ ಅವರು ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿಯಾಗಿದ್ದಾರೆ. ಭಾರತವು ಮೊದಲ ಬಾರಿಗೆ 'ಇಂಡಿಯಾ ಹೌಸ್' ಅನ್ನು ಪ್ಯಾರಿಸ್‌ನಲ್ಲಿ ಉದ್ಘಾಟಿಸಿತು. ಇದನ್ನು ಸ್ವತಃ ನೀತಾ ಅಂಬಾನಿ ಅವರೇ ಉದ್ಘಾಟನೆ ಮಾಡಿದರು
* ನೀತಾ ಅಂಬಾನಿ ಅವರು 2016ರಿಂದ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಸದಸ್ಯರಾಗಿದ್ದಾರೆ. ಫ್ರಾನ್ಸ್‌ನ ಪ್ರಮುಖ ಪತ್ರಿಕೆಯಾದ ಲೆ ಫಿಗರೊ, 2036ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ಭಾರತದ ಪ್ರಯತ್ನವನ್ನು ಬೆಂಬಲಿಸುವ ನಿರ್ಣಾಯಕ ರಾಯಭಾರಿಯಾಗಿ ಅಂಬಾನಿಯನ್ನು ಗುರುತಿಸಿದೆ.
ಭಾರತದ 2036ರ ಒಲಿಂಪಿಕ್ಸ್ ಆತಿಥ್ಯಕ್ಕೆ ನೀತಾ ಅಂಬಾನಿ ಇನ್ಫ್ಲುಯೆನ್ಸಿಲ್ ಅಂಬಾಸಿಡರ್
Published by Bhagya R K
31 ಜುಲೈ 2024