* ಭಾರತೀಯ ನೌಕಾಪಡೆ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ರಾಯಲ್ ನೇವಿ ನಡುವೆ ದ್ವಿಪಕ್ಷೀಯ ಕಡಲ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗಿದೆ. ಎರಡೂ ದೇಶಗಳು ಮೊದಲ ಬಾರಿಗೆ ತಮ್ಮ ಸ್ವದೇಶಿ ವಿಮಾನವಾಹಕ ನೌಕೆಗಳ ನೇತ್ರತ್ವದಲ್ಲಿ ಜಂಟಿ ಸಮರಾಭ್ಯಾಸವನ್ನು ಯಶಸ್ವಿಯಾಗಿ ಆರಂಭಿಸಿವೆ.
🎯 ಸಮರಾಭ್ಯಾಸದ ಉದ್ದೇಶಗಳು
* ಈ ಕಡಲ ಕವಾಯಿತು ಪ್ರಧಾನವಾಗಿ ಎರಡು ನೌಕಾಪಡೆಗಳ ನಡುವಿನ ಸಂಯೋಜಿತ ಕಡಲ ಮತ್ತು ವಾಯು ಸಾಮರ್ಥ್ಯಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
* ಕಾರ್ಯಾಚರಣೆಯ ಗಮನ: ಈ ಅಭ್ಯಾಸವು ಎರಡೂ ಪಡೆಗಳು ಒಟ್ಟಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಸಂಕೀರ್ಣ ಕಾರ್ಯಾಚರಣೆಗಳ ಮೇಲೆ ಗಮನ ಹರಿಸಿದೆ. ಇದರಲ್ಲಿ ಜಲಾಂತರ್ಗಾಮಿ ವಿರೋಧಿ ಯುದ್ಧ (Anti-Submarine Warfare), ಕ್ರಾಸ್ ಚೆಕ್ ಪ್ಲೇನ್ ಕಾರ್ಯಾಚರಣೆಗಳು ಮತ್ತು ವಾಯು ರಕ್ಷಣಾ ಕವಾಯತುಗಳು (Air Defence Drills) ಸೇರಿವೆ.
* ಇಂಡೋ-ಪೆಸಿಫಿಕ್ ಕೇಂದ್ರಿತ: ಈ ಸಮರಾಭ್ಯಾಸವು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಉಭಯ ದೇಶಗಳ ತಂತ್ರಯುಕ್ತ ಸಹಕಾರವನ್ನು ಬಲಪಡಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ.
🌊 ಕಡಲ ಭದ್ರತೆಯ ಮಹತ್ವ
'ಕೊಂಕಣ್ 25' ಸಮರಾಭ್ಯಾಸವು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿನ ಕಡಲ ಭದ್ರತೆಗೆ ಸಂಬಂಧಿಸಿದಂತೆ ಎರಡೂ ರಾಷ್ಟ್ರಗಳ ಹಂಚಿಕೆಯ ಬದ್ಧತೆಯನ್ನು ಎತ್ತಿ ಹಿಡಿಯುತ್ತದೆ.
ಮುಖ್ಯ ಉದ್ದೇಶಗಳು:
# ಸಮುದ್ರ ಭದ್ರತೆ
# ಸಾಗರದ ಮೇಲೆ ನಿಯಂತ್ರಣ
# ಮುಕ್ತ ನ್ಯಾವಿಗೇಷನ್ ಹಕ್ಕುಗಳ ರಕ್ಷಣೆ
ಯುಕೆ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್ ನಿಯೋಜನೆ
* ರಾಯಲ್ ನೇವಿಯ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್ (CSG) ಪ್ರಸ್ತುತ 'ಆಪರೇಷನ್ ಹೈ ಮಾಸ್ಟ್' ಎಂದು ಕರೆಯಲ್ಪಡುವ 8 ತಿಂಗಳ ಜಾಗತಿಕ ನಿಯೋಜನೆಯಲ್ಲಿದೆ. ಈ ಜಾಗತಿಕ ನಿಯೋಜನೆಯ ಭಾಗವಾಗಿ, UK-CSG ಯು ಭಾರತೀಯ ನೌಕಾಪಡೆಯೊಂದಿಗೆ ಸಂಪರ್ಕ ಸಾಧಿಸಿದೆ, ಇದು ಭಾರತದೊಂದಿಗೆ ಆಳವಾದ ರಕ್ಷಣಾ ಸಂಬಂಧವನ್ನು ನಿರ್ಮಿಸುವ UK ಯ ಬದ್ಧತೆಯನ್ನು ಸೂಚಿಸುತ್ತದೆ.
ಶನಿವಾರ, 11 ಅಕ್ಟೋಬರ್ 2025
4:00 ಅಪರಾಹ್ನ
Daily PDF
ಭಾರತ್-UK ಜಂಟಿ ಸಮರಾಭ್ಯಾಸ: ಕಡಲ ಸಹಕಾರವನ್ನು ಬಲಪಡಿಸಿದ 'ಕೊಂಕಣ್ 25'
Authored by:
Akshata Halli