* ಭಾರತ ಮತ್ತು ತಾಂಜಾನಿಯಾ ತಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಕಾರ್ಯತಂತ್ರದ ಪಾಲುದಾರಿಕೆಯ ಮಟ್ಟಕ್ಕೆ ನವೀಕರಿಸಿದ್ದು, ವಿವಿಧ ಪ್ರಮುಖ ಡೊಮೇನ್‌ಗಳಲ್ಲಿ ಸಹಕಾರವನ್ನು ಬಲಪಡಿಸಲು ಎರಡೂ ರಾಷ್ಟ್ರಗಳು ಆರು ಒಪ್ಪಂದಗಳಿಗೆ ಸಹಿ ಹಾಕಿದವು.
* ಡಿಜಿಟಲ್ ಡೊಮೇನ್, ಸಂಸ್ಕೃತಿ, ಕ್ರೀಡೆ, ಕಡಲ ಕೈಗಾರಿಕೆಗಳು ಮತ್ತು ವೈಟ್ ಶಿಪ್ಪಿಂಗ್ ಮಾಹಿತಿ ಹಂಚಿಕೆಯಲ್ಲಿ ಎರಡು ರಾಷ್ಟ್ರಗಳ ನಡುವೆ ತಾಂತ್ರಿಕ ಮತ್ತು ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸಲು ಅಡಿಪಾಯವನ್ನು ಹಾಕುತ್ತವೆ..
* ಎರಡೂ ರಾಷ್ಟ್ರಗಳು ಭಾರತೀಯ ರೂಪಾಯಿ ಮತ್ತು ತಾಂಜೇನಿಯಾದ ಶಿಲ್ಲಿಂಗ್ ನಡುವಿನ ವ್ಯಾಪಾರವನ್ನು ಉತ್ತೇಜಿಸುತ್ತಿವೆ , ಭಾರತದಲ್ಲಿ ಅಧಿಕೃತ ಬ್ಯಾಂಕ್‌ಗಳು ತಾಂಜಾನಿಯಾದಲ್ಲಿನ ಕರೆಸ್ಪಾಂಡೆಂಟ್ ಬ್ಯಾಂಕ್‌ಗಳ ವಿಶೇಷ ರೂಪಾಯಿ ವೋಸ್ಟ್ರೋ ಖಾತೆಗಳನ್ನು ತೆರೆಯಲು ಅನುವು ಮಾಡಿಕೊಡುತ್ತವೆ.
* ತಾಂಜಾನಿಯಾ ಸರ್ಕಾರವು ಅವರು ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ ಅಲೈಯನ್ಸ್ ಮತ್ತು ಗ್ಲೋಬಲ್ ಬಯೋಫ್ಯೂಯಲ್ ಅಲೈಯನ್ಸ್‌ಗೆ ಸೇರುವುದಾಗಿ ಘೋಷಿಸಿದರು .
* ಎರಡು ರಾಷ್ಟ್ರಗಳು ಡಿಜಿಟಲ್ ವಲಯ, ಸಾಂಸ್ಕೃತಿಕ ವಲಯ, ಕ್ರೀಡಾ ವಲಯ, ಸಮುದ್ರಯಾನ ಕೈಗಾರಿಕೆಗಳು, ಪರಸ್ಪರ ಮಾಹಿತಿಯ ಹಂಚಿಕೆ ಮತ್ತು ಶ್ವೇತ ಹಡಗು ಯಾವ ವಲಯದಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸಲು ಮುಂದಾಗಿವೆ.
* ಹಡಗು ಯಾನ ವಲಯದಲ್ಲಿ ಹಡಗುಗಳನ್ನು ಮೂರು ವರ್ಣಗಳಾಗಿ ವಿಂಗಡಿಸಲಾಗುತ್ತದೆ. ಶ್ವೇತ ವರ್ಣದ ಹಡಗುಗಳು ಎಂದರೆ ವಾಣಿಜ್ಯ ಹಡಗುಗಳು, ಬೂದು ಬಣ್ಣದ ಹಡಗುಗಳು ಎಂದರೆ ಮಿಲಿಟರಿ ಹಡಗುಗಳು ಮತ್ತು ಕಪ್ಪು ವರ್ಣದ ಹಡಗುಗಳು ಎಂದರೆ ಅಕ್ರಮವಾಗಿ ಸಂಚರಿಸುತ್ತಿರುವ ಹಡಗುಗಳು ಎಂದು ವರ್ಗೀಕರಿಸಲಾಗುತ್ತದೆ.
* ತಾಂಜಾನಿಯಾ ಪೂರ್ವ ಆಫ್ರಿಕಾದ ಅತಿದೊಡ್ಡ ದೇಶವಾಗಿದೆ. ಎಂಟು ನೆರೆಹೊರೆಯವರೊಂದಿಗೆ, ಇದು ಹೆಚ್ಚು ಅಂತರರಾಷ್ಟ್ರೀಯ ಗಡಿಗಳನ್ನು ಹೊಂದಿರುವ ವಿಶ್ವದ ಅಗ್ರ 10 ದೇಶಗಳಲ್ಲಿ ಒಂದಾಗಿದೆ.
* ತಾಂಜಾನಿಯಾಗೆ ಭಾರತದ ಪ್ರಮುಖ ರಫ್ತುಗಳು ಪೆಟ್ರೋಲಿಯಂ ಉತ್ಪನ್ನ, ಔಷಧ ಉತ್ಪನ್ನಗಳು, ಯಂತ್ರೋಪಕರಣ, ಅಣುಸ್ಥಾವರ, ವಿದ್ಯುನ್ಮಾನ ಉಪಕರಣಗಳು, ಸಕ್ಕರೆ ಮತ್ತು ಸಿಹಿ ತಿನಿಸುಗಳು.
* ಭಾರತಕ್ಕೆ ತಾಂಜಾನಿಯಾದಿಂದ ರಫ್ತುಗಳು ಚಿನ್ನದ ಅದಿರು, ಗೋಡಂಬಿ, ಏಲಕ್ಕಿ ಮತ್ತು ಇತರೆ ಉತ್ಪನ್ನಗಳನ್ನು ರಫ್ತು ಮಾಡುತ್ತದೆ.
* ತಾಂಜಾನಿಯಾಗೆ ಭಾರತದ ಕೊಡುಗೆಗಳು :
- ತಾಂಜಾನಿಯಾದ, ಜಂಜಿಬಾರ್ ನಲ್ಲಿ ಭಾರತದ ಐ.ಐ.ಟಿ. ಮದ್ರಾಸ್ ಶೈಕ್ಷಣಿಕ ಸಂಸ್ಥೆಯು ತನ್ನ ಮೊಟ್ಟ ಮೊದಲ ಸಾಗರೋತ್ತರ ಶೈಕ್ಷಣಿಕ ಸಂಸ್ಥೆಯನ್ನು ಸ್ಥಾಪಿಸಿದೆ.
- ಭಾರತ ಸರ್ಕಾರ 2023 ರಲ್ಲಿ 10 ಅಂಬುಲೆನ್ಸ್ ಗಳನ್ನು ತಾಂಜಾನಿಯಾಗೆ ಉಡುಗೊರೆಯಾಗಿ ನೀಡಿತು.
- 2018,2020 ಮತ್ತು 2021 ರಲ್ಲಿ ಭಾರತ ತಾಂಜಾನಿಯಾಗಿ ಅವಶ್ಯಕ ಔಷಧಿಗಳನ್ನು ಉಡುಗೊರೆಯಾಗಿ ನೀಡಿದೆ.
- ತಾಂಜಾನಿಯಾದಲ್ಲಿ ಭಾರತ ಸರ್ಕಾರದ ವತಿಯಿಂದ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ತಂತ್ರಜ್ಞಾನದ ಎರಡು ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಈ ಸ್ಥಳದಲ್ಲಿ ಭಾರತದಲ್ಲಿನ ಸೂಪರ್ ಕಂಪ್ಯೂಟರ್ "ಪರಂ" ಅನ್ನು ಅನುಷ್ಠಾನಗೊಳಿಸಿದೆ.
- ತಾಂಜಾನಿಯಾದ ದ್ವಿತೀಯ ಹಂತದ ಶಿಕ್ಷಣ ಸಂಸ್ಥೆಗಳಿಗೆ ಗಣಿತ ಮತ್ತು ವಿಜ್ಞಾನದ ಎನ್.ಸಿ.ಇ.ಆರ್.ಟಿ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದೆ.
- ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುವ ಉದ್ದೇಶದಿಂದ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ.
ಗುರುವಾರ, 19 ಅಕ್ಟೋಬರ್ 2023
8:02 ಅಪರಾಹ್ನ
Daily PDF
ಭಾರತ - ತಾಂಜಾನಿಯ ಮಧ್ಯೆ ಇರುವ ಸಂಬಂಧಗಳು
Authored by:
Bhagya R K