* ಭಾರತ ಮೂಲದ ಅಮೆರಿಕನ್ ಗಾಯಕಿ ಮತ್ತು ಉದ್ಯಮಿ ಚಂದ್ರಿಕಾ ಟಂಡನ್ ಅವರಿಗೆ 67ನೇ ಸಾಲಿನ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ.
* ಭಾರತೀಯ ಶಾಸ್ತ್ರೀಯ ಸಂಗೀತ, ವೈದಿಕ ಪಠಣ ಮತ್ತು ಅಂತರರಾಷ್ಟ್ರೀಯ ಸಂಪ್ರದಾಯಗಳನ್ನು ಒಳಗೊಂಡ ಈ ಆಲ್ಬಮ್ 'ಬೆಸ್ಟ್ ನ್ಯೂ ಏಜ್' ಆಲ್ಬಂ ವಿಭಾಗದಲ್ಲಿ ಟಂಡನ್ ಅವರ 'ತ್ರಿವೇಣಿ' ಆಲ್ಬಂಗಾಗಿ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.
* ಸ್ಪರ್ಧೆಯಲ್ಲಿ ಇದ್ದ ಭಾರತದ ರಿಕ್ಕಿ ಕೇಜ್ ಮೊದಲಾದವರನ್ನು ಅವರು ಹಿಂದಿಕ್ಕಿದ್ದಾರೆ.
* ಲಾಸ್ ಏಂಜಲೀಸ್‌ನಲ್ಲಿ 67ನೇ ಅತಿ ದೊಡ್ಡ ಸಂಗೀತ ಪ್ರಶಸ್ತಿ ಕಾರ್ಯಕ್ರಮ ನಡೆಯುತ್ತಿದೆ. ಈ ಹಿಂದೆ ಟಂಡನ್ ಅವರು 2009ರಲ್ಲಿ 'ಸೋಲ್ ಕಾಲ್' ಎನ್ನುವ ಆಲ್ಬಂಗೆ ಮೊದಲನೇ ಬಾರಿ ಗ್ರ್ಯಾಮಿ ಪ್ರಶಸ್ತಿ ಗೆದ್ದಿದ್ದರು.
* 2024ರ ಆಗಸ್ಟ್ 30ರಂದು ತ್ರಿವೇಣಿ ಆಲ್ಬಂ ಬಿಡುಗಡೆಯಾಗಿದ್ದು, ಒಟ್ಟು ಏಳು ಹಾಡುಗಳ ಈ ಆಲ್ಬಂನಲ್ಲಿ, ಪ್ರತಿಯೊಂದು ಹಾಡು ಬೇರೆ ಬೇರೆ ಕಥೆಯನ್ನು ಹೇಳುತ್ತದೆ ಎಂದು ಟಂಡನ್ ಅವರ ತಂಡ ಹೇಳಿದೆ.
* ಚಂದ್ರಿಕಾ ಹುಟ್ಟಿ ಬೆಳೆದಿದ್ದು ಚೆನ್ನೈನಲ್ಲಿ. ‘ಸೋಲ್ ಚಾಂಟ್ಸ್ ಮ್ಯೂಸಿಕ್’ ಹೆಸರಿನ ನಾನ್ ಪ್ರಾಫಿಟೆಬಲ್ ಮ್ಯೂಸಿಕ್ ಲೇಬಲ್ನ 2005ರಲ್ಲಿ ಆರಂಭಿಸಿದರು.
* ಅವರು ಶಿಕ್ಷಣ ಕ್ರೇತ್ರದಲ್ಲೂ ಸಾಧನೆ ಮಾಡಿದ್ದಾರೆ. ಉನ್ನತ ಶಿಕ್ಷಣ ಕ್ಷೇತ್ರದ ಕಲ್ಯಾಣಕ್ಕೆ ಅವರು ಶ್ರಮಿಸಿದ್ದಾರೆ. ನ್ಯೂಯಾರ್ಕ್ನ ಹಿಂದೂ ದೇವಾಲಯಕ್ಕೆ ಅವರು ಸಾಕಷ್ಟು ದಾನ ಮಾಡಿದ್ದಾರೆ. ಮಹಿಳಾ ಕಲ್ಯಾಣದತ್ತವೂ ಅವರು ಗಮನ ಹರಿಸಿದ್ದಾರೆ.
ಭಾರತ ಮೂಲದ ಅಮೆರಿಕ ಉದ್ಯಮಿ ಚಂದ್ರಿಕಾ ಟಂಡನ್ಗೆ ಗ್ರ್ಯಾಮಿ ಪ್ರಶಸ್ತಿ
Published by Jyoti Angadi
03 ಫೆಬ್ರವರಿ 2025