* ಭಾರತೀಯ ಸೇನೆ ಮತ್ತು ಸಿಂಗಾಪುರ ಸಶಸ್ತ್ರ ಪಡೆಗಳ ನಡುವಿನ ದ್ವಿಪಕ್ಷೀಯ ಸಮರಾಭ್ಯಾಸವಾದ ಜಂಟಿ ಮಿಲಿಟರಿ ವ್ಯಾಯಾಮ ಅಗ್ನಿ ವಾರಿಯರ್ (XAW-2024) ನ 13 ನೇ ಆವೃತ್ತಿಯು ಶನಿವಾರದಂದು( ನವೆಂಬರ್ 30) ದೇವ್ಲಾಲಿ (ಮಹಾರಾಷ್ಟ್ರ) ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ಮುಕ್ತಾಯಗೊಂಡಿತು.
* ನವೆಂಬರ್ 28 ರಿಂದ 30 ರವರೆಗೆ ನಡೆದ ಮೂರು ದಿನಗಳ ಸಮರಾಭ್ಯಾಸದಲ್ಲಿ ಸಿಂಗಾಪುರದ ಆರ್ಮ್ಡ್ ಫೋರ್ಸ್ 182 ಸಿಂಗಾಪೂರ್ ಫಿರಂಗಿ ಮತ್ತು ಭಾರತೀಯ ಸೇನಾ ತುಕಡಿಯಿಂದ 114 ಫಿರಂಗಿದಳದ ಸೈನಿಕರ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು.
* "XAW-2024 ರ ಗುರಿಯು ವಿಶ್ವಸಂಸ್ಥೆಯ ಚಾರ್ಟರ್ ಅಡಿಯಲ್ಲಿ ಬಹುರಾಷ್ಟ್ರೀಯ ಶಕ್ತಿಯಾಗಿ ಜಂಟಿ ಸಾಧಿಸಲು ಡ್ರಿಲ್‌ಗಳು ಮತ್ತು ಕಾರ್ಯವಿಧಾನಗಳ ಪರಸ್ಪರ ತಿಳುವಳಿಕೆಯನ್ನು ಹೆಚ್ಚಿಸುವುದು" ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
* ಈ ವ್ಯಾಯಾಮವು ಜಂಟಿ ಫೈರ್‌ಪವರ್ ಯೋಜನೆ, ಕಾರ್ಯಗತಗೊಳಿಸುವಿಕೆ ಮತ್ತು ಎರಡೂ ಸೇನೆಗಳ ಫಿರಂಗಿದಳದಿಂದ ಹೊಸ ತಲೆಮಾರಿನ ಸಲಕರಣೆಗಳ ಬಳಕೆಯನ್ನು ಪ್ರದರ್ಶಿಸಿತು.
* ಅಕ್ಟೋಬರ್‌ನಲ್ಲಿ ಸಿಂಗಾಪುರದ ರಕ್ಷಣಾ ಸಚಿವ ಡಾ. ಎನ್‌ಜಿ ಇಂಗ್ ಹೆನ್ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜಂಟಿ ಮಿಲಿಟರಿ ತರಬೇತಿಯ ಕುರಿತಾಗಿ ಇದ್ದ ಒಪ್ಪಂದವನ್ನು ಐದು ವರ್ಷಗಳವರೆಗೆ ವಿಸ್ತರಿಸಲಾಗಿತ್ತು.
ಭಾರತ ಮತ್ತು ಸಿಂಗಾಪುರ್ ಜಂಟಿ ಸಮರಾಭ್ಯಾಸ
Published by Jyoti Angadi
02 ಡಿಸೆಂಬರ್ 2024