* ದೂರಸಂಪರ್ಕ ಕ್ಷೇತ್ರವನ್ನು ಕ್ರಾಂತಿಕಾರಕಗೊಳಿಸಿದ ಖ್ಯಾತಿಯ ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಸಂಸ್ಥೆ ದೇಶದ ನಾನಾ ಭಾಗಗಳ ಎಂಟು ಐಐಟಿಗಳ ಸಹಯೋಗದಿಂದ ಅಭಿವೃದ್ಧಿಪಡಿಸಿರುವ ಕೃತಕ ಬುದ್ಧಿಮತ್ತೆಯ (ಎಐ) ಭಾರತ್ ಜಿಪಿಟಿಯನ್ನು ಪರಿಚಯಿಸಲು ಸಜ್ಜುಗೊಂಡಿದೆ.
* ಶೀಘ್ರವೇ ಮಾರುಕಟ್ಟೆಗೆ ಬರಲಿರುವ ಎಐ ಟೂಲ್‌ಗೆ 'ಹನುಮಾನ್' ಎಂದು ಹೆಸರಿಸಲಾಗಿದೆ. ಐಐಟಿ-ಬಾಂಬೆ ನೇತೃತ್ವದ ಭಾರತ್‌ಜಿಪಿಟಿ ವ್ಯವಸ್ಥೆಯನ್ನು ಸೀತಾ ಮಹಾಲಕ್ಷ್ಮಿ ಹೆಲ್ತ್ ಕೇರ್ (ಎಸ್‌ಎಂಎಲ್) ಅನಾವರಣಗೊಳಿಸಿದೆ.
* ಭಾರತ್ ಜಿ ಪಿ ಟಿ ಹನುಮಾನ್ ಇದು 22 ಭಾಷೆಗಳಲ್ಲಿ ತರಬೇತಿಗೊಳಿಸಲಾದ ಇಂಡಿಕ್ ಲಾರ್ಜ್ ಲ್ಯಾಂಗ್ವೇಜ್ ಸರಣಿಯಾಗಿದೆ .
* ಮುಂಬೈಯ ಐಐಟಿ - ಬಾಂಬೆಯಲ್ಲದೆ ಇತರ ಏಳು ಐಐಟಿಗಳು ಈ ಯೋಜನೆಯಲ್ಲಿ ಭಾಗವಹಿಸುತ್ತಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ,ಎಸ್ ಎಂ ಎಲ್ ಮತ್ತು ರಿಲಯನ್ಸ್ ಜಿಯೋ ಈ ಯೋಜನೆಗೆ ಬೆಂಬಲ ನೀಡುತ್ತಿವೆ.
* ಭಾರತ್ ಜಿ ಪಿ ಟಿ ಹನುಮಾನ್ ಪ್ರಸ್ತುತ ಹಿಂದಿ, ತಮಿಳು, ತೆಲಗು, ಮಲಯಾಳಂ ಮತ್ತು ಮರಾಠಿ ಸಹಿತ 11 ಭಾರತೀಯ ಭಾಷೆಗಳಲ್ಲಿ ಪ್ರತಿಕ್ರಿಯಿಸಲಿದೆ. ಭಾರತದ ಎಲ್ಲ 22 ಅಧಿಕೃತ ಭಾಷೆಗಳಿಗೆ ಅದನ್ನು ವಿಸ್ತರಿಸುವ ಗುರಿ ಹೊಂದಿದೆ.
* ಭಾರತ್ ಚಾಟ್ ಜಿಪಿಟಿ ಶೈಲಿಯ AIR ಮಾದರಿಯಾಗಿದ್ದು, ಮಾರ್ಚ್‌ನಲ್ಲಿ ತನ್ನ ಸೇವೆಯನ್ನು ಪ್ರಾರಂಭಿಸಲಿದೆ. ಭಾರತ್‌ಜಿಪಿಟಿ ಆರ್‌ಐಎಲ್ ಮತ್ತು ಎಂಟು ಪ್ರಮುಖ ವಿಶ್ವವಿದ್ಯಾನಿಲಯಗಳನ್ನು ಒಳಗೊಂಡ ಮೆಗಾ ಕನ್ಸೋರ್ಟಿಯಂ ಆಗಿದೆ.
ಮಂಗಳವಾರ, 27 ಫೆಬ್ರುವರಿ 2024
4:00 ಅಪರಾಹ್ನ
Daily PDF
ಭಾರತ್ ಜಿ ಪಿ ಟಿ "ಹನುಮಾನ್" ಬಿಡುಗಡೆ ಸಿದ್ಧತೆ
Authored by:
Bhagya R K