* ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2026ರ ಹಣಕಾಸು ವರ್ಷದ ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯಿದೆ (ಎನ್‌ಡಿಎಎ)ಗೆ ಸಹಿ ಹಾಕಿದ್ದಾರೆ. ಈ ಕಾಯಿದೆ ಅಮೆರಿಕದ ಇಂಡೋ–ಪೆಸಿಫಿಕ್ ನೀತಿಯ ಪ್ರಮುಖ ಭಾಗವಾಗಿದ್ದು, ಭಾರತ ಜೊತೆ ಸೇನಾ ಸಹಕಾರವನ್ನು ಇನ್ನಷ್ಟು ವಿಸ್ತರಿಸುವುದು ಮತ್ತು ‘ಕ್ವಾಡ್’ ರಾಷ್ಟ್ರಗಳೊಂದಿಗೆ ನಿಕಟ ಸಹಕಾರವನ್ನು ಬಲಪಡಿಸುವುದನ್ನು ಗುರಿಯಾಗಿಟ್ಟುಕೊಂಡಿದೆ.
* ಈ ಕಾಯಿದೆಯ ಮೂಲಕ ಅಮೆರಿಕದ ರಾಷ್ಟ್ರಭದ್ರತೆಗೆ ಸುಮಾರು 890 ಬಿಲಿಯನ್ ಡಾಲರ್ ವೆಚ್ಚವನ್ನು ಅನುಮೋದಿಸಲಾಗಿದೆ. ಸ್ವತಂತ್ರ ಹಾಗೂ ಮುಕ್ತ ಇಂಡೋ–ಪೆಸಿಫಿಕ್ ಪ್ರದೇಶವನ್ನು ಬಲಪಡಿಸುವ ಉದ್ದೇಶದಿಂದ ಭಾರತ–ಅಮೆರಿಕ ನಡುವಿನ ತಂತ್ರಾತ್ಮಕ ಸಂಬಂಧಗಳನ್ನು ಗಟ್ಟಿಗೊಳಿಸಲು ಅಮೆರಿಕ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ.
* ಎನ್‌ಡಿಎಎ ಕಾಯಿದೆ ಭಾರತ ಜೊತೆ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸೇನಾ ಸಹಕಾರ, ಜಂಟಿ ಸಮರಾಭ್ಯಾಸಗಳಲ್ಲಿ ಭಾಗವಹಿಸುವಿಕೆ, ರಕ್ಷಣಾ ವ್ಯಾಪಾರ ವೃದ್ಧಿ, ವಿಪತ್ತು ನಿರ್ವಹಣೆ ಮತ್ತು ಮಾನವೀಯ ನೆರವು ಕ್ಷೇತ್ರಗಳಲ್ಲಿ ನಿಕಟ ಸಹಕಾರಕ್ಕೆ ಒತ್ತು ನೀಡುತ್ತದೆ. ಜೊತೆಗೆ ಕಡಲ ಭದ್ರತೆಯನ್ನು ಅಮೆರಿಕ–ಭಾರತ ಸಹಕಾರದ ಪ್ರಮುಖ ಕ್ಷೇತ್ರವಾಗಿ ಗುರುತಿಸಲಾಗಿದೆ.
* ಶಾಂತಿ ಸ್ಥಾಪನೆಯ ಕಾರ್ಯಸೂಚಿಯನ್ನು ಜಾರಿಗೆ ತರುವುದು, ಹಾಗೂ ದೇಶೀಯ ಮತ್ತು ವಿದೇಶಿ ಭದ್ರತಾ ಸವಾಲುಗಳಿಂದ ಅಮೆರಿಕವನ್ನು ರಕ್ಷಿಸುವುದರಲ್ಲಿ ಈ ಕಾಯಿದೆ ಮಹತ್ವದ ಪಾತ್ರ ವಹಿಸಲಿದೆ ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.
* ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ಸೇರಿರುವ ‘ಕ್ವಾಡ್’ ಗುಂಪನ್ನು 2017ರಲ್ಲಿ ಸ್ಥಾಪಿಸಲಾಗಿದ್ದು, ಇಂಡೋ–ಪೆಸಿಫಿಕ್ ಪ್ರದೇಶದಲ್ಲಿ ಅಕ್ರಮಣಕಾರಿ ನಡವಳಿಕೆಗಳನ್ನು ಎದುರಿಸಲು ಮತ್ತು ಪ್ರಾದೇಶಿಕ ಸ್ಥಿರತೆಯನ್ನು ಕಾಪಾಡಲು ಈ ಒಕ್ಕೂಟ ಕಾರ್ಯನಿರ್ವಹಿಸುತ್ತಿದೆ.
ಶನಿವಾರ, 20 ಡಿಸೆಂಬರ್ 2025
12:06 ಅಪರಾಹ್ನ
Daily PDF
ಭಾರತ–ಅಮೆರಿಕ ಸೇನಾ ಸಹಕಾರ ವಿಸ್ತರಣೆ: ಎನ್‌ಡಿಎಎ ಕಾಯಿದೆಗೆ ಡೊನಾಲ್ಡ್ ಟ್ರಂಪ್ ಸಹಿ
Authored by:
Akshata Halli