* ಲಾವೋಸ್‌ನಲ್ಲಿ 21 ಆಸಿಯಾನ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು. ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು 'ಏಷ್ಯಾ ವಲಯದ ಭವಿಷ್ಯದ ದಿಕ್ಕೂಚಿಯಾಗಿ ಪ್ರಾದೇಶಿಕವಾಗಿ ರಾಷ್ಟ್ರಗಳು ಒಟ್ಟುಗೂಡುವುದು ನಿರ್ಣಾಯಕ' ಎಂದು ಪ್ರತಿಪಾದಿಸಿದ್ದಾರೆ.
* 'ಕಳೆದ ದಶಕದಲ್ಲಿ ಭಾರತ -ಆಸಿಯಾನ್ ರಾಷ್ಟ್ರಗಳ ವಾಣಿಜ್ಯ ವಹಿವಾಟು 130 ಬಿಲಿಯನ್ ಡಾಲರ್‌ಗೂ ಅಧಿಕವಾಗಿದೆ. ಹೆಚ್ಚಿನ ಆರ್ಥಿಕ ವಹಿವಾಟಿಗೆ ಪೂರಕವಾಗಿ ಸರಕುಗಳ ವಾಣಿಜ್ಯ ಒಪ್ಪಂದ ಪರಿಶೀಲಿಸಲಾಗುವುದು' ಎಂದು ಮೋದಿ ಹೇಳಿದ್ದಾರೆ.
* ಭಾರತ ಮತ್ತು ಆಸಿಯಾನ್ ರಾಷ್ಟ್ರಗಳ ನಡುವೆ ಸಮಗ್ರ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ಪ್ರಧಾನಿ ನರೇಂದ್ರ ಮೋದಿ 10 ಅಂಶಗಳ ಕಾರ್ಯಕ್ರಮವನ್ನು ಪ್ರಕಟಿಸಿದ್ದಾರೆ.
1. 2025ರಲ್ಲಿ ಭಾರತ -ಆಸಿಯಾನ್ ರಾಷ್ಟ್ರಗಳ ಪ್ರವಾಸೋದ್ಯಮ ವರ್ಷಾಚರಣೆ.
2 .ನಳಂದ ವಿಶ್ವವಿದ್ಯಾಲಯದಲ್ಲಿ ಸ್ಕಾಲರ್‌ಶಿಪ್‌ಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸುವುದು. 
3. ಆಸಿಯಾನ್ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ಭಾರತದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಅನುದಾನ ಒದಗಿಸುವುದು.
4.  ಯುವಶೃಂಗ, ಸ್ಟಾರ್ಟಪ್ ಉತ್ಸವ, ಹ್ಯಾಕಥಾನ್ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ 'ಪೂರ್ವ ಕೇಂದ್ರಿತ ನೀತಿ'ಯ ದಶಕದ ಆಚರಣೆ
5. ಭಾರತ -ಆಸಿಯಾನ್ ಮಹಿಳಾ ವಿಜ್ಞಾನಿಗಳ ಸಮಾವೇಶ ಆಯೋಜನೆ.
6. ವಿಕೋಪ ನಿರ್ವಹಣೆ ಕಾರ್ಯಗಳಿಗೆ ಒತ್ತು ನೀಡಲು 42ಕೋಟಿ ರೂ.ನೆರವು
7. ಆರೋಗ್ಯ ಕ್ಷೇತ್ರದಲ್ಲಿ ಸ್ಥಿತಿಸ್ಥಾಪಕತ್ವಕ್ಕಾಗಿ ಆರೋಗ್ಯ ಸಚಿವರ ಸಂಪರ್ಕ ಜಾಲ ರಚನೆ 
8. ಡಿಜಿಟಲ್ ಮತ್ತು ಸೈಬ‌ರ್ ಬೆದರಿಕೆ ಎದುರಿಸಲು ಆಸಿಯಾನ್ - ಭಾರತ ಸೈಬರ್ ನೀತಿಯ ನಿಯಮಿತ ಪರಿಶೀಲನೆ
9.ಹವಾಮಾನ ವೈಪರೀತ್ಯ ಎದುರಿಸಿ, ಹವಾಮಾನ ಸ್ಥಿತಿಸ್ಥಾಪಕತ್ವ ಗುರಿ ಸಾಧನೆಗೆ 'ಫ್ಲ್ಯಾಂಟ್ ಎ ಟ್ರಿ' ಅಭಿಯಾನಕ್ಕೆ ಕೈಜೋಡಿಸಲು ಆಸಿಯಾನ್ ನಾಯಕರಿಗೆ ಆಹ್ವಾನ
10.ಆಸಿಯಾನ್ - ಭಾರತ ಸಂವಹನಕ್ಕಾಗಿ ಚಾವಡಿಯ ಸಂಪರ್ಕ ಜಾಲ