* ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಪ್ರದರ್ಶನದ 27 ನೇ ಆವೃತ್ತಿಯು ಬೆಂಗಳೂರು ಟೆಕ್ ಶೃಂಗಸಭೆ (BTS) 2024 ನವೆಂಬರ್ 19 ರಿಂದ 21 ರ ವರೆಗೆ ಬೆಂಗಳೂರು ಅರಮನೆಯಲ್ಲಿ ನಡೆಯಲಿದೆ.
* ಟೆಕ್ ಶೃಂಗಸಭೆಯ ಈ ವರ್ಷದ ಘೋಷವಾಕ್ಯ ʼಬ್ರೇಕಿಂಗ್ ಬೌಂಡರೀಸ್ʼ ಆಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸತನವನ್ನು ವೈವಿಧ್ಯಮಯ ವಲಯಗಳ ನಡುವಿನ ಪ್ರಾಮುಖ್ಯತೆಯನ್ನು ಘೋಷವಾಕ್ಯ ಒಳಗೊಂಡಿದೆ.
* ಈ ಶೃಂಗಸಭೆಯಲ್ಲಿ ಕೈಗಾರಿಕೆ ಹಾಗೂವ್ಯವಹಾರಗಳನ್ನು ಮರುರೂಪಿಸುತ್ತಿರುವ ತಾಂತ್ರಿಕ ಪ್ರಗತಿಗಳು ಮತ್ತು ಪ್ರವೃತ್ತಿಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
* ಈ ಶೃಂಗಸಭೆಯಲ್ಲಿ ಭಾರತದ ಪ್ರಮುಖ ಐಟಿ, ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್, ಎವಿಜಿಸಿ, ಬಯೋಟೆಕ್ ಮತ್ತು ಸ್ಟಾರ್ಟ್ಅಪ್ ಸಂಸ್ಥೆಗಳ 200 ಕ್ಕೂ ಹೆಚ್ಚು ಸಿಇಒಗಳೊಂದಿಗೆ ಸಂವಾದಾತ್ಮಕ ಅಧಿವೇಶನ ನಡೆಸಿದರು.
* ಈ ವರ್ಷ, ಬಯೋಟೆಕ್ ಮತ್ತು ಹೆಲ್ತ್‌ಟೆಕ್, ಎಲೆಕ್ಟ್ರೋ ಮತ್ತು ಸೆಮಿಕಾನ್, ಟೆಲಿಕಾಂ, ಸ್ಪೇಸ್‌ಟೆಕ್, ಮೊಬಿಲಿಟಿ, ಗ್ರೀನ್‌ಟೆಕ್, ಎಡ್ಯೂಟೆಕ್, ಬಿಎಫ್‌ಎಸ್‌ಐ ಮತ್ತು ಫಿನ್‌ಟೆಕ್, ಮತ್ತು ಅನಿಮೇಷನ್ ಮತ್ತು ಗೇಮಿಂಗ್‌ನಂತಹ ವಲಯದ ಪೆವಿಲಿಯನ್‌ಗಳಿಗೆ ವಿಶೇಷ ಒತ್ತು ನೀಡಲಾಗುವುದು.
ಸೋಮವಾರ, 15 ಜುಲೈ 2024
3:28 ಅಪರಾಹ್ನ
Daily PDF
ಬೆಂಗಳೂರು ತಂತ್ರಜ್ಞಾನ ಶೃಂಗಸಭೆ - 27ನೇ ಆವೃತ್ತಿ ನವೆಂಬರ್ 19-21ರ ವರೆಗೆ ನಡೆಯಲಿದೆ.
Authored by:
Bhagya R K