* ಯೂನಿವರ್ಸಿಟಿ ಆಫ್ ಹೈದರಾಬಾದ್ ನಡೆಸಿದ ಸಮೀಕ್ಷೆಯ ಪ್ರಕಾರ, ಬೆಂಗಳೂರು 2025ರ ಮೊದಲ ಮೂರು ತಿಂಗಳಲ್ಲಿ ಅಪರಾಧ ಪ್ರಮಾಣ ತಗ್ಗಿಸಿರುವುದು ಗಮನಿಸಬಹುದಾದ ವಿಷಯವಾಗಿದೆ.
* ಈ ಮೂಲಕ ಬೆಂಗಳೂರು 'ಭಾರತದ ಅತ್ಯಂತ ಸುರಕ್ಷಿತ ನಗರ' ಎಂಬ ಬಿರುದಿಗೆ ಪಾತ್ರವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
* 2025ರ ಮೊದಲ ತ್ರೈಮಾಸಿಕದಲ್ಲಿ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಅಪರಾಧ ಪ್ರಕರಣಗಳಲ್ಲಿ ಶೇ.12ರಷ್ಟು ಇಳಿಕೆಯಾಗಿದೆ.
* ಸೈಬರ್ ವಂಚನೆ ಶೇ.39ರಷ್ಟು, ಡಕಾಯಿತಿ ಶೇ.71ರಷ್ಟು, ರಾಬರಿ ಶೇ.73ರಷ್ಟು, ಸರಗಳ್ಳತನ ಶೇ.57ರಷ್ಟು ಹಾಗೂ ರಾತ್ರಿ ಕಳವು ಶೇ.41ರಷ್ಟು ಕಡಿಮೆಯಾಗಿದೆ.
* ಇತ್ತ ಕೋಲ್ಕತಾ, ಅಪರಾಧ ದರದಲ್ಲಿ ಏರಿಕೆ ಕಾಣಿಸಿಕೊಂಡು 'ಅತ್ಯಂತ ಅಸುರಕ್ಷಿತ ನಗರ' ಎನ್ನುವ ಹಣೆಪಟ್ಟಿಗೆ ಗುರಿಯಾಗಿದೆ.
* ನಗರದಲ್ಲಿ ಕಳ್ಳತನ, ಸೈಬರ್ ಕ್ರೈಂ ಮತ್ತು ಇತರ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ಪೊಲೀಸರ ಮೇಲಿನ ನಂಬಿಕೆ ಕುಂದಿದೆ ಎಂದು ಸಮೀಕ್ಷೆ ತೋರುತ್ತದೆ.
ಸೋಮವಾರ, 19 ಮೇ 2025
3:15 ಅಪರಾಹ್ನ
Daily PDF
ಬೆಂಗಳೂರು — ಭಾರತದ ಅತ್ಯಂತ ಸುರಕ್ಷಿತ ನಗರ:
Authored by:
Jyoti Angadi