➤ ಚೀನಾದ ಬೀಜಿಂಗ್ ನಗರವು ಮೊದಲ ಸ್ಥಾನದಲ್ಲಿದ್ದರೆ, ನಮ್ಮ ಬೆಂಗಳೂರು ಎರಡನೇ ಸ್ಥಾನವನ್ನು ಅಲಂಕರಿಸುವ ಮೂಲಕ ಕೃತಕ ಬುದ್ಧಿಮತ್ತೆ (Artificial Intelligence) ತಂತ್ರಜ್ಞಾನದಲ್ಲಿ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದೆ. ಜಾಗತಿಕ ಮಟ್ಟದ ಟಾಪ್ 40 ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಗಳ ಪಟ್ಟಿಯಲ್ಲಿ ಬೆಂಗಳೂರು 15ನೇ ಸ್ಥಾನ ಪಡೆದಿದೆ.
➤ ಪ್ರಮುಖ ರ‍್ಯಾಂಕಿಂಗ್ ಅಂಶಗಳು (Success Factors): ವರದಿಯು ಸ್ಟಾರ್ಟ್‌ಅಪ್‌ಗಳ ಯಶಸ್ಸನ್ನು ಅಳೆಯಲು ಪ್ರಮುಖ 6 ಮಾನದಂಡಗಳನ್ನು ಪರಿಗಣಿಸಿದ್ದು, 1 ರಿಂದ 10 ರವರೆಗಿನ ಅಂಕಗಳನ್ನು ನೀಡಿದೆ. ಬೆಂಗಳೂರಿನ ಸಾಧನೆ ಈ ಕೆಳಗಿನಂತಿದೆ:
- ಕಾರ್ಯಕ್ಷಮತೆ (Performance): 9/10
- ಸಂಶೋಧನೆ ಮತ್ತು ಅಭಿವೃದ್ಧಿ (R&D Engine): 9/10 (ಈ ವಿಭಾಗದಲ್ಲಿ ಬೆಂಗಳೂರು ಅಮೆರಿಕದ ಪ್ರಸಿದ್ಧ 'ಸಿಲಿಕಾನ್ ವ್ಯಾಲಿ'ಗಿಂತಲೂ ಮುಂದಿದೆ!)
- ಎಐ-ನೇಟಿವ್ ಕ್ಲಸ್ಟರ್ (AI-Native Cluster): 8/10
- ಹಣಕಾಸು ನೆರವು (Funding): 7/10
- ಮಾರುಕಟ್ಟೆ ತಲುಪುವಿಕೆ (Market Reach): 7/10
- ಪ್ರತಿಭೆ ಮತ್ತು ಅನುಭವ (Talent & Experience): 4/10
- ಆರ್ಥಿಕ ಮೌಲ್ಯ (Ecosystem Value): ಬೆಂಗಳೂರಿನ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯ ಒಟ್ಟು ಮೌಲ್ಯ ಬರೋಬ್ಬರಿ 153 ಬಿಲಿಯನ್ ಡಾಲರ್ ದಾಟಿದೆ.
- ವೆಂಚರ್ ಕ್ಯಾಪಿಟಲ್ (VC) ಫಂಡಿಂಗ್: 2021 ರಿಂದ 2025ರ ಅವಧಿಯಲ್ಲಿ ನಗರದ ಸ್ಟಾರ್ಟ್‌ಅಪ್‌ಗಳಿಗೆ 39 ಬಿಲಿಯನ್ ಡಾಲರ್ ಹೂಡಿಕೆ ಹರಿದುಬಂದಿದೆ. ಇದು ಜಾಗತಿಕ ಸರಾಸರಿಗಿಂತ (5 ಬಿಲಿಯನ್ ಡಾಲರ್) ಗಣನೀಯವಾಗಿ ಹೆಚ್ಚಾಗಿದೆ. ಜೆಪ್ಟೋ (Zepto), ಮೀಶೋ (Meesho) ಮತ್ತು ಉಡಾನ್ (Udaan) ಪ್ರಮುಖ ಧನಸಹಾಯ ಪಡೆದ ಸ್ಟಾರ್ಟ್‌ಅಪ್‌ಗಳಾಗಿವೆ.
- ಯುನಿಕಾರ್ನ್‌ಗಳ ಸಂಖ್ಯೆ: ಬೆಂಗಳೂರಿನಲ್ಲಿ ಪ್ರಸ್ತುತ 30 ಸಕ್ರಿಯ ಯುನಿಕಾರ್ನ್‌ಗಳು (1 ಬಿಲಿಯನ್ ಡಾಲರ್‌ಗಿಂತ ಹೆಚ್ಚು ಮೌಲ್ಯದ ಸ್ಟಾರ್ಟ್‌ಅಪ್) ಕಾರ್ಯನಿರ್ವಹಿಸುತ್ತಿವೆ. ಜಾಗತಿಕ ಸರಾಸರಿ ಕೇವಲ 11 ಆಗಿದೆ.
- ಕರ್ನಾಟಕದ ಪಾಲು: ಭಾರತದ ಒಟ್ಟು ಸ್ಟಾರ್ಟ್‌ಅಪ್ ಹೂಡಿಕೆಯಲ್ಲಿ ಕರ್ನಾಟಕ ಒಂದೇ ಬರೋಬ್ಬರಿ 46% ರಷ್ಟು ಪಾಲನ್ನು ತನ್ನದಾಗಿಸಿಕೊಂಡಿದೆ. 2010 ರಿಂದ ಈವರೆಗೆ ಬೆಂಗಳೂರು ಮೂಲದ ಸ್ಟಾರ್ಟ್‌ಅಪ್‌ಗಳು ಒಟ್ಟು 79 ಬಿಲಿಯನ್ ಡಾಲರ್ ಹೂಡಿಕೆ ಆಕರ್ಷಿಸಿವೆ.
ಇನ್ನು ಹೆಚ್ಚಿನ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ