➤ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಹಂಚಿಕೆಯಾಗಿರುವ ವಿಶ್ವದ ಅತಿದೊಡ್ಡ ಮ್ಯಾಂಗ್ರೋವ್ ಕಾಡಾದ 'ಸುಂದರಬನ' (Sundarbans) ಪ್ರದೇಶದಲ್ಲಿರುವ ರಾಯಲ್ ಬೆಂಗಾಲ್ ಹುಲಿಗಳ (Bengal Tiger) ಸಂರಕ್ಷಣೆಗೆ ಈ ಜಂಟಿ ಆಡಳಿತಾತ್ಮಕ ಸಹಕಾರವು ಪ್ರಮುಖ ಮೈಲಿಗಲ್ಲಾಗಲಿದೆ.
➤ ಇಂಟರ್‌ನ್ಯಾಷನಲ್ ಬಿಗ್ ಕ್ಯಾಟ್ ಅಲಯನ್ಸ್ (IBCA): ಇದು ಬೆಕ್ಕಿನ ಜಾತಿಗೆ (Big Cats) ಸೇರಿದ ಜಗತ್ತಿನ ಪ್ರಮುಖ 7 ದೊಡ್ಡ ವನ್ಯಜೀವಿಗಳ ಸಂರಕ್ಷಣೆ, ಅವುಗಳ ಆವಾಸಸ್ಥಾನಗಳ ರಕ್ಷಣೆ ಹಾಗೂ ಜಾಗತಿಕ ಮಟ್ಟದಲ್ಲಿ ತಾಂತ್ರಿಕ ಮತ್ತು ಆಡಳಿತಾತ್ಮಕ ಸಹಕಾರವನ್ನು ಬಲಪಡಿಸುವ ಉದ್ದೇಶ ಹೊಂದಿರುವ ಒಂದು ಅಂತರರಾಷ್ಟ್ರೀಯ ಒಕ್ಕೂಟವಾಗಿದೆ.
➤ ಒಕ್ಕೂಟದ ವ್ಯಾಪ್ತಿಗೆ ಬರುವ 7 ಪ್ರಮುಖ ವನ್ಯಜೀವಿಗಳು:
- ಹುಲಿ (Tiger)
- ಸಿಂಹ (Lion)
- ಚಿರತೆ (Leopard)
- ಹಿಮಚಿರತೆ (Snow Leopard)
- ಚೀತಾ (Cheetah)
- ಜಾಗುವಾರ್ (Jaguar)
- ಪೂಮಾ (Puma)
ಈ 7 ಪ್ರಾಣಿಗಳಲ್ಲಿ ಜಾಗುವಾರ್ ಮತ್ತು ಪೂಮಾ ಹೊರತುಪಡಿಸಿ, ಉಳಿದ 5 ದೊಡ್ಡ ಬೆಕ್ಕಿನ ಜಾತಿಗೆ ಸೇರಿದ ಪ್ರಾಣಿಗಳಿಗೆ ಭಾರತವು ನೈಸರ್ಗಿಕ ಆವಾಸಸ್ಥಾನವಾಗಿದೆ.
➤ ವಿಶ್ವದಲ್ಲಿ ಈ 7 ಪ್ರಮುಖ ಪ್ರಾಣಿಗಳ ಸಂತತಿ ಕ್ಷೀಣಿಸದಂತೆ ತಡೆಯುವುದು, ಆವಾಸಸ್ಥಾನಗಳ ರಕ್ಷಣೆ, ಜ್ಞಾನ ವಿನಿಮಯ ಮತ್ತು ಸಂರಕ್ಷಣಾ ತಂತ್ರಜ್ಞಾನಗಳನ್ನು ಪರಸ್ಪರ ಹಂಚಿಕೊಳ್ಳುವುದು ಇದರ ಪ್ರಮುಖ ಗುರಿಯಾಗಿದೆ. ಜಗತ್ತಿನಾದ್ಯಂತ ಒಟ್ಟು 95 ದೇಶಗಳು ಈ ಬಿಗ್ ಕ್ಯಾಟ್‌ಗಳ ಆವಾಸಸ್ಥಾನಗಳನ್ನು ಹೊಂದಿದ್ದು (Range Countries), ಅವುಗಳನ್ನು ಒಟ್ಟುಗೂಡಿಸುವ ಕೆಲಸ ಪ್ರಗತಿಯಲ್ಲಿದೆ.
ಮೇ ತಿಂಗಳ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ