* ನಾಗರಿಕ ದಂಗೆಯಲ್ಲಿ ಬೆಂದುಹೋಗಿರುವ ಬಾಂಗ್ಲಾದೇಶದಲ್ಲಿ ಸೇನೆಯ ಬೆಂಬಲದಿಂದ ಮಧ್ಯಂತರ ಸರಕಾರ ಬರಲಿದ್ದು, ನೊಬೆಲ್ ಪುರಸ್ಕೃತ ಮುಹಮ್ಮದ್ ಯೂನಸ್ ಆಗಸ್ಟ್ 8ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
* ದುಬೈನಿಂದ ಮಧ್ಯಾಹ್ನ ವಿಮಾನದಲ್ಲಿ ಢಾಕಾಕ್ಕೆ ಯೂನಸ್ ಬಂದಿಳಿಯಲಿದ್ದು. ಬಳಿಕ ಸರ್ಕಾರದ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಯೂನಸ್ ಅವರಿಗೆ ಅಧಿಕಾರ ನೀಡುವುದನ್ನು ವಿದ್ಯಾರ್ಥಿ ಸಂಘಟನೆಗಳು ಸ್ವಾಗತಿಸಿವೆ.
* ಶೇಕ್ ಹಸೀನಾ ಪ್ರತಿಭಟನೆಯ ತೀವ್ರತೆಗೆ ರಾಜೀನಾಮೆ ನೀಡಿ ಭಾರತಕ್ಕೆ ಪರಾರಿಯಾದ ಬಳಿಕ ಬಾಂಗ್ಲಾದೇಶದ ಮುಂದಿನ ನಾಯಕತ್ವದ ಕುರಿತು ಸೇನಾ ಮುಖ್ಯ ಸ್ಥ ವಾಕರ್-ಉಜ್ -ಜಮಾನ್ ಹಾಗೂ ಅಧ್ಯಕ್ಷ ಮೊಹಮ್ಮದ್ ಷಹಬುದ್ದೀನ್ ಆಗಸ್ಟ್ 6ರಂದು ಚರ್ಚೆ ನಡೆಸಿದ್ದು, ಮಧ್ಯಂತರ ಸರ್ಕಾರದ ನಾಯಕನಾಗಿ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ರಚಿಸಲು ನಿರ್ಧರಿಸಲಾಗಿದೆ' ಎಂದು ಬಾಂಗ್ಲಾದೇಶದ ಅಧ್ಯಕ್ಷರ ಕಚೇರಿ ಘೋಷಿಸಿದೆ.
* ''ಯೂನಸ್ ಅವರು ಮಧ್ಯಂತರ ಸರಕಾರದ ಮುಖ್ಯಸ್ಥರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರ ನೇತೃತ್ವದ ಸಲಹಾ ಸಮಿತಿಯು 15 ಸದಸ್ಯರನ್ನು ಹೊಂದಿರಲಿದೆ,'' ಎಂದು ಜಮಾನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗುರುವಾರ, 08 ಆಗಸ್ಟ್ 2024
11:46 ಪೂರ್ವಾಹ್ನ
Daily PDF
ಬಾಂಗ್ಲಾದೇಶದಲ್ಲಿ ಮಧ್ಯಂತರ ಸರಕಾರ ರಚನೆ : ನೊಬೆಲ್ ಪುರಸ್ಕೃತ ಯೂನಸ್ ಕೈಗೆ ಬಾಂಗ್ಲಾ ಚುಕ್ಕಾಣಿ
Authored by:
Jyoti Angadi