* ಭಾರತೀಯ ಸಂಶೋಧನಾ ಸಂಸ್ಥೆ (ISRO) ಇದೇ ಮೊದಲ ಬಾರಿಗೆ ತನ್ನ ದೇಶೀಯ ನಿರ್ಮಿತ ರಾಕೆಟ್ PSLV ಮೂಲಕ ಮೂರು ಪ್ರಯೋಗಗಳಿಗಾಗಿ 'ಜೈವಿಕ ಪದಾರ್ಥ'ಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ.
* ಪಿಎಸ್‌ಎಲ್‌ವಿ (ಪಿಒಇಎಂ-4) ಪಾಲಕ್ ಸೊಪ್ಪು, ಅಲಸಂದೆ ಬೀಜ ಹಾಗೂ ಗಟ್ ಬ್ಯಾಕ್ಟಿರಿಯಾವನ್ನು ಸಣ್ಣ ಗಾತ್ರದ ಸೀಲ್ಡ್ ಬಾಕ್ಸ್‌ನಲ್ಲಿ ಈ ತಿಂಗಳಾಂತ್ಯಕ್ಕೆ ಬಾಹ್ಯಾಕಾಶಕ್ಕೆ ಕೊಂಡೊಯ್ಯಲಿದೆ.
* ಭೂಮಿಯ ಆಚೆಗೆ ಗುರುತ್ವ ಅಥವಾ ಕನಿಷ್ಠ ಗುರುತ್ವ ಇರುತ್ತದೆ. ಈ ಪ್ರತಿಕೂಲ ಪರಿಸ್ಥಿತಿಯಲ್ಲಿ ಸಸ್ಯಕೋಶಗಳು ಹೇಗೆ ಬೆಳೆಯುತ್ತವೆ ಮತ್ತು ಆ ವಾತಾವರಣಕ್ಕೆ ಹೇಗೆ ಹೊಂದಿಕೊಳ್ಳುತ್ತವೆ ಎನ್ನುವುದನ್ನು 'ಅಮಿಟಿ ಪ್ಲಾಂಟ್ ಎಕ್ಸ್ ಪರಿಮೆಂಟಲ್ ಮಾಡ್ಯೂಲ್ ಇನ್ ಸ್ಪೇಸ್' (APEMS) ಪ್ರಯೋಗದ ಮೂಲಕ ಅಧ್ಯಯನ ಮಾಡಲಾಗುತ್ತದೆ.
* ಪಾಲಕ್ ಸೊಪ್ಪನ್ನು ಬಳಸಿಕೊಂಡು ಕೋಶಗಳ ಬೆಳವಣಿಗೆಗೆ ಸಂಬಂಧಿಸಿದ ಬದಲಾವಣೆಗಳನ್ನು ಗಮನಿಸಲಾಗುತ್ತದೆ. ಇದಕ್ಕಾಗಿ 'ಪಿಎಸ್‌ಎಲ್‌ವಿ ಆರ್ಬಿಟಲ್ ಎಕ್ಸ್ ಪರಿಮೆಂಟಲ್ ಮಾಡ್ಯೂಲ್'ನಲ್ಲಿ ಮತ್ತು ಮುಂಬಯಿಯ ಅಮಿಟಿ ವಿಶ್ವವಿದ್ಯಾಲಯದಲ್ಲೇ ಇರುವ ನಿಯಂತ್ರಿತ ಲ್ಯಾಬ್‌ನ ಪರಿಸರದಲ್ಲಿ ಅಧ್ಯಯನ ಮಾಡಲಾಗುತ್ತದೆ.
* ಪ್ರಯೋಗದಲ್ಲಿ LED ಬಳಸಿ ಬೆಳಕನ್ನು ನೀಡಲಾಗುತ್ತದೆ. ಅದೇ ರೀತಿಯಲ್ಲಿ ಜೆಲ್ ಮಾದರಿಯಲ್ಲಿ ಪೋಷಕಾಂಶವನ್ನು ಒದಗಿಸಲಾಗುತ್ತದೆ. ಬಣ್ಣ ಬೆಳವಣಿಗೆಗೆ ಸೇರಿದಂತೆ ಸಸ್ಯಕೋಶಗಳಲ್ಲಿನ ಯಾವುದೇ ಸಣ್ಣ ಬದಲಾವಣೆಯನ್ನೂ ಮಾಡ್ಯೂಲ್ ಒಳಗಡೆ ಅಳವಡಿಸಲಾಗಿರುವ ಕ್ಯಾಮೆರಾದ ಮೂಲಕ ರೆಕಾರ್ಡ್ ಮಾಡಲಾಗುತ್ತದೆ.
* ಜೀವಕೋಶಗಳು ಸತ್ತರೆ ಅವುಗಳು ಬಣ್ಣವನ್ನು ಬದಲಾಯಿಸುತ್ತವೆ. ಇದು ಸಸ್ಯಗಳ ಆರೋಗ್ಯದ ಬಗೆಗಿನ ಸ್ಪಷ್ಟ ಸೂಚನೆಯಾಗಿದೆ. ಇದರ ಜತೆಗೆ ಮಾಡ್ಯೂಲ್ ಒಳಗಡೆ ಒತ್ತಡ, ಆರ್ದ್ರತೆ ಹಾಗೂ ಇಂಗಾಲದ ಮಟ್ಟವನ್ನು ಮೇಲ್ವಿಚಾರಣೆ ಮಾಡಲು ಸೆನ್ಸಾರ್ ಅಳವಡಿಸಲಾಗಿದೆ. ಇದು ಸಸ್ಯದ ಬೆಳವಣಿಗೆಯ ಸಮಗ್ರ ಮಾಹಿತಿಯನ್ನು ಒದಗಿಸುತ್ತದೆ.
ಬಾಹ್ಯಾಕಾಶಕ್ಕೆ ಪಾಲಕ್ ಸೊಪ್ಪುನ್ನು ಕೊಂಡಯ್ಯಲಿರುವ ಇಸ್ರೋ
Published by Jyoti Angadi
26 ಡಿಸೆಂಬರ್ 2024