* ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮಾಲಿಗಾಂವ್ ಚರಿಯಾಲಿಯಿಂದ ಗುವಾಹಟಿಯ ಕಾಮಾಖ್ಯ ಗೇಟ್‌ಗೆ ಸಂಪರ್ಕಿಸುವ 2.63 ಕಿಲೋಮೀಟರ್ ಅಳತೆಯ ರಾಜ್ಯದ ಅತಿ ಉದ್ದದ ಮೇಲ್ಸೇತುವೆಯಾದ ನೀಲಾಚಲ ಮೇಲ್ಸೇತುವೆಯನ್ನು ಆಗಸ್ಟ್ 30 ರಂದು ಉದ್ಘಾಟನೆ ಮಾಡಿದರು.
* ಈ ಯೋಜನೆಯನ್ನು 420.75 ಕೋಟಿ ರೂ ವೆಚ್ಚದಲ್ಲಿ ಶ್ರೀ ಗೌತಮ್ ಕನ್‌ಸ್ಟ್ರಕ್ಷನ್ ಕಂ ಲಿಮಿಟೆಡ್ ಮತ್ತು ಅನುಪಮ್ ನಿರ್ಮಾಣ್ ಪ್ರೈವೇಟ್ ಲಿಮಿಟೆಡ್‌ನಿಂದ 35 ತಿಂಗಳೊಳಗೆ ಪೂರ್ಣಗೊಳಿಸಲಾಗಿದೆ.
* ರಸ್ತೆ ಸಂಪರ್ಕವನ್ನು ಸುಧಾರಿಸ ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಅಸ್ಸಾಂ ಸರ್ಕಾರವು ರಾಜ್ಯಾದ್ಯಂತ 21 ಮೇಲ್ಸೇತುವೆಗಳು ಮತ್ತು ಸೇತುವೆಗಳ ಯೋಜನೆಗಳನ್ನು ಶೀಘ್ರದಲ್ಲೇ ತರಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಅಸ್ಸಾಂನ ಅತಿ ಉದ್ದದ ನೀಲಾಚಲ ಮೇಲ್ಸೇತುವೆ ಉದ್ಘಾಟನೆ
Published by Bhagya R K
31 ಆಗಸ್ಟ್ 2023