* ಅಸ್ಸಾಂನ ಆರು ಉತ್ಪನ್ನ ಮತ್ತು ಕರಕುಶಲ ಕಲೆಗಳಿಗೆ ಭೌಗೋಳಿಕ ಮಾನ್ಯತೆ (ಜಿ.ಐ.) ದೊರಕಿದೆ ಎಂದು ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರು ಮಾರ್ಚ್ 31 ರಂದು (ಭಾನುವಾರ) ತಿಳಿಸಿದ್ದಾರೆ.
* ಹಿಮಂತ ಬಿಸ್ವಾ ಶರ್ಮ ಅವರು 'ನಬಾರ್ಡ್, ಆರ್‌ಒ ಗುವಾಹಟಿ ಮತ್ತು ಜಿಐ ತಜ್ಞ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರಜನಿ ಕಾಂತ್ ಅವರ ಬೆಂಬಲದೊಂದಿಗೆ ಅಸ್ಸಾಂನ ಆರು ಸಾಂಪ್ರದಾಯಿಕ ಕಲೆಗಳಿಗೆ ಜಿಐ ಮನ್ನಣೆ ದೊರಕಿದೆ' ಎಂದು ತಿಳಿಸಿದ್ದಾರೆ.
* 'ರಾಜ್ಯದ ಬಿಹು ಡೋಲ್ (ವಾದ್ಯ), ಜಾಪಿ (ಸಾಂಪ್ರದಾಯಿಕ ಟೋಪಿ), ಸರ್ಥೇಬಾಡಿ ಕಲೆ, ಅಶಾರಿಕಾಂಡಿ ಟೆರಾಕೋಟ ಕಲೆ, ಅಸ್ಸಾಂ ಮಡಕೆ ಕಲೆ, ಕೈಮಗ್ಗದ ಈ ಉತ್ಪನ್ನಗಳಿಗೆ ಭೌಗೋಳಿಕ ಮನ್ನಣೆ ದೊರಕಿದೆ. ಈ ಉತ್ಪನ್ನಗಳು ರಾಜ್ಯದ ಇತಿಹಾಸದೊಂದಿಗೆ ಬೆಸೆದುಕೊಂಡಿವೆ ಮತ್ತು ಪ್ರತಿದಿನ ಸುಮಾರು 1 ಲಕ್ಷ ಜನರ ಬದುಕಿಗೆ ಆಸರೆಯಾಗಿವೆ' ಎಂದಿದ್ದಾರೆ.
ಸೋಮವಾರ, 01 ಎಪ್ರಿಲ್ 2024
11:45 ಪೂರ್ವಾಹ್ನ
Daily PDF
ಅಸ್ಸಾಂನ ಆರು ಉತ್ಪನ್ನ ಮತ್ತು ಕರಕುಶಲ ಕಲೆಗಳಿಗೆ ಭೌಗೋಳಿಕ ಮಾನ್ಯತೆ
Authored by:
Bhagya R K