* ಮೈಸೂರಿನ ಕುವೆಂಪುನಗರದ ಚಿಕ್ಕಮ್ಮನಿಕೇತನ ಕಲ್ಯಾಣ ಮಂಟಪದಲ್ಲಿ ಜನಸ್ಪಂಧನ ಹಾಗೂ ಮಾನವ ಮಂಟಪದ ವತಿಯಿಂದ ಆಯೋಜಿಸಿರುವ ಅಂತರ್ಜಾತಿ ವಿವಾಹಿತರ ಸಭೆ ಹಾಗೂ ಅಂತರ್ಜಾತಿ ದಂಪತಿಗಳ ನೊಂದಣಿ ಮಾಡುವ  ವೆಬ್ ಸೈಟ್ ಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಮೇ 23 ರಂದು ಚಾಲನೆ ನೀಡಿದರು.
* ಮೈಸೂರು ರಾಜ್ಯದ ಅಂತರ್ಜಾತಿ ವಿವಾಹಿತರನ್ನು ಒಂದೇ ವೇದಿಕೆಯಡಿ ತರಲು ರೂಪಿಸಲಾದ ವೆಬ್‌ಸೈಟ್ www.janaspandana.org.in ಅನ್ನು ಉದ್ಘಾಟಿಸಲಾಯಿತ್ತು.
* 'ರಾಜ್ಯದಲ್ಲಿ ಎಷ್ಟು ಅಂತರ್ಜಾತಿ ವಿವಾಹಿತರಿದ್ದಾರೆಂಬ ಲೆಕ್ಕವಿಲ್ಲ. ಹಾಗಾಗಿ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳುವುದರಿಂದ ನಮ್ಮದೇ ಸಮಾಜ ರೂಪುಗೊಳ್ಳಲು ಸಾಧ್ಯ. ತಿಂಗಳಲ್ಲಿಯೇ ರಾಜ್ಯ ಮಟ್ಟದ ಸಮಾವೇಶ ಮಾಡಲಾಗುವುದು' ಎಂದು ಮಾನವಮಂಟಪ ವೇದಿಕೆಯ ಅಧ್ಯಕ್ಷ ಪ್ರೊ. ಕಾಳಚನ್ನೇಗೌಡ ಅವರು ತಿಳಿಸಿದ್ದಾರೆ.
* ಅಂತರ್ಜಾತಿ ಜೋಡಿಗಳನ್ನು ನೋಂದಾಯಿಸಲು ಎನ್‌ಜಿಒವೊಂದು ಮುಂದಾಗಿರುವುದು ಇದೇ ಮೊದಲು.