* ಭಾರತೀಯ ವಾಯುಪಡೆಯ (IMF) ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಫ್ಲೋರಿಡಾದ ಬಾಹ್ಯಾಕಾಶ ನಿಲ್ದಾಣದಿಂದ ಸ್ಪೇಸ್‌ಎಕ್ಸ್ ಡ್ರಾಗನ್ ಬಾಹ್ಯಾಕಾಶ ನೌಕೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಪ್ರಯಾಣಿಸಿದ ಮೊದಲ ಭಾರತೀಯ ಗಗನಯಾತ್ರಿಯಾಗಿ ಅವರು ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ.
* ನಾಸಾ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ನಡುವಿನ ಜಂಟಿ ಪ್ರಯತ್ನದ ಭಾಗವಾಗಿ, ಶುಭಾಂಶು ಶುಕ್ಲಾ ಅವರನ್ನು 'ಆಕ್ಸಿಯಂ ಮಿಷನ್-4' ರ ಪೈಲಟ್ ಆಗಿ ನೇಮಿಸಲಾಗಿದೆ.
* ಜನವರಿ 30ರಂದು ಅಧಿಕೃತ ಘೋಷಣೆಯು ಹೊರಬಿದ್ದು, ಶುಭಾನ್ಷು ಶುಕ್ಲಾ ಸೇರಿದಂತೆ ನಾಲ್ವರು ಯಾತ್ರಿಗಳನ್ನು ಮಾರ್ಚ್-ಮೇ ತಿಂಗಳಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕರೆದೊಯ್ಯಲಾಗುತ್ತದೆ. ನಾಸಾ ಮತ್ತು ಪಾಲುದಾರ ರಾಷ್ಟ್ರಗಳು ಇದಕ್ಕೆ ಸಮ್ಮತಿ ನೀಡಿವೆ.
* ನಾಲ್ವರೂ ಯಾತ್ರಿಗಳು ಒಟ್ಟು 18 ದಿನಗಳ ಕಾಲ ಅಲ್ಲೇ ಇದ್ದು ವಿವಿಧ ರೀತಿಯ ಸಂಶೋಧನೆ ನಡೆಸಲಿದ್ದಾರೆ. ಈ ಉಡ್ಡಯನಕ್ಕೆ ಅಗತ್ಯವಾದ ತರಬೇತಿಯನ್ನು ಅಮೆರಿಕದಲ್ಲಿ ಪಡೆದುಕೊಂಡಿದ್ದಾರೆ. 'ಆಕ್ಸಿಯಂ" ಎನ್ನುವುದು ಖಾಸಗಿ ಕಂಪನಿಯಾಗಿದ್ದು, ಅದು ಸ್ಪೇಸ್ ಎಕ್ಸ್ ನೌಕೆಯ ಮೂಲಕ ನಾಲ್ವರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುತ್ತಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಇಸ್ರೋ ಗಗನಯಾತ್ರಿ ಶುಭಾಂಶು ಶುಕ್ಲಾ
Published by Jyoti Angadi
05 ಫೆಬ್ರವರಿ 2025