* 'ಅನ್ನಭಾಗ್ಯ' ಯೋಜನೆಯಡಿ ಐದು ಕೆ.ಜಿ ಅಕ್ಕಿ ಜತೆಗೆ ನೀಡುತ್ತಿರುವ ನಗದು ಬದಲು 'ದಿನಸಿ ಕಿಟ್' ವಿತರಿಸುವ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿದೆ.
* ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ ಅನ್ನಭಾಗ್ಯದಡಿ ಅಕ್ಕಿ ಹೊಂದಿಸಲು ಸಾಧ್ಯವಾಗದೇ ಹೋದಾಗ ತಲಾ 5 ಕೆ.ಜಿ ಅಕ್ಕಿ ಹಾಗೂ ಪ್ರತಿ ಕೆ.ಜಿ ಅಕ್ಕಿಗೆ ₹34ರಂತೆ ಲೆಕ್ಕಹಾಕಿ ಪ್ರತಿ ಫಲಾನುಭವಿ ಖಾತೆಗೆ ₹170 ನೇರ ಜಮಾ ಮಾಡಲು ಸರ್ಕಾರ ತೀರ್ಮಾನಿಸಿತ್ತು.
* ಆದರೆ ಮುಂದಿನ ದಿನಗಳಲ್ಲಿ ಜನರ ಇಷ್ಟದಂತೆ ದವಸ ಧಾನ್ಯಗಳು, ಇಲ್ಲವೇ ಅಡುಗೆ ಎಣ್ಣೆ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಅಂತಿಮ ಹಂತದ ತಿರ್ಮಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಚರ್ಚಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
* ಅಡುಗೆ ಎಣ್ಣೆ, ಬೇಳೆ, ಸಕ್ಕರೆ, ಉಪ್ಪು ದಿನಸಿ ಕಿಟ್‌ನಲ್ಲಿಇರಲಿದೆ. ಈ ಕುರಿತು ಆಹಾರ ಇಲಾಖೆಯು ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದು, ಅಕ್ಟೋಬರ್ 1ರಿಂದ ಜಾರಿಗೊಳಿಸಲು ಸಿದ್ಧತೆ ನಡೆದಿದೆ.
ಗುರುವಾರ, 29 ಆಗಸ್ಟ್ 2024
11:59 ಪೂರ್ವಾಹ್ನ
Daily PDF
ಅನ್ನಭಾಗ್ಯ: 5 ಕೆ.ಜಿ ಅಕ್ಕಿಯ ನಗದು ಬದಲು 'ದಿನಸಿ ಕಿಟ್' ವಿತರಣೆ
Authored by:
Jyoti Angadi