* ಕಾಂಬೋಡಿಯಾದ ಅಂಕೋರ್ ವಾಟ್ ಅನ್ನು ಟೈಮ್ಸ್ ಟ್ರಾವೆಲ್ ಏಷ್ಯಾದಲ್ಲಿ ಅತ್ಯಂತ ಫೋಟೋಜೆನಿಕ್ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗುರುತಿಸಿದೆ ಎಂದು ಕಾಂಬೋಡಿಯನ್ ಪ್ರಧಾನಿ ಹನ್ ಮಾನೆಟ್ ಅವರು ಸೆಪ್ಟೆಂಬರ್ 15 ರಂದು ತಿಳಿಸಿದ್ದಾರೆ.
* ಟೈಮ್ಸ್ ಆಫ್ ಇಂಡಿಯಾದ ಏಷ್ಯಾದ ಟಾಪ್ ಟೆನ್ ಫೋಟೊಜೆನಿಕ್ ಯುನೆಸ್ಕೋ ಸೈಟ್‌ಗಳ ಪಟ್ಟಿಯನ್ನು ಒಳಗೊಂಡ ಅವರ ಅಧಿಕೃತ ಟೆಲಿಗ್ರಾಮ್ ಚಾನೆಲ್‌ನಲ್ಲಿ ಪೋಸ್ಟ್ ಮೂಲಕ ಈ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
* ಭಾರತದ ತಾಜ್ ಮಹಲ್ ಮತ್ತು ಹಂಪಿ, ಚೀನಾದ ಮಹಾಗೋಡೆ, ಮ್ಯಾನ್ಮಾರ್ ನ ಪ್ರಾಚೀನ ನಗರ ಬಗಾನ್,ಇಂಡೋನೇಷ್ಯಾದ ಬೊರೊಬುದೂರ್ ವಿಯೆಟ್ನಾಂನ ಹಾ ಲಾಂಗ್ ಬೇ ಜಪಾನ್ ನ ಕ್ಯೋಟೋದ ಐತಿಹಾಸಿಕ ಸ್ಮಾರಕಗಳು,ಜೋರ್ಡಾನ್ ನ ಪೆಟ್ರಾ ಮತ್ತು ಫಿಲಿಪೈನ್ಸ್ ನ ಕಾರ್ಡಿಲ್ಲೆರಾಸ್ನ ರೈಸ್ ಟೆರೇಸ್ ಗಳು ಟಾಪ್ 10 ಪಟ್ಟಿಯಲ್ಲಿವೆ.
* ಸೀಮ್ ರೀಪ್ ಪ್ರಾಂತ್ಯದ ಅಂಕೋರ್ ಆರ್ಕಿಯಾಲಾಜಿಕಲ್ ಪಾರ್ಕ್‌ನಲ್ಲಿರುವ ಅಂಕೋರ್ ವಾಟ್ 401-ಚದರ-ಕಿಲೋಮೀಟರ್ ಉದ್ಯಾನವನದಲ್ಲಿ 9 ನೇ ಮತ್ತು 13 ನೇ ಶತಮಾನದ ನಡುವೆ ನಿರ್ಮಿಸಲಾದ 91 ಪುರಾತನ ದೇವಾಲಯಗಳನ್ನು ಒಳಗೊಂಡಿರುವ ಪ್ರಮುಖ ದೇವಾಲಯವಾಗಿದೆ.
* ಇದು ಕಾಂಬೋಡಿಯಾದ ಅತಿ ಹೆಚ್ಚು ಭೇಟಿ ನೀಡಿದ ಪ್ರವಾಸಿ ತಾಣವಾಗಿದೆ. 2024ರ ಮೊದಲ ಎಂಟು ತಿಂಗಳಲ್ಲಿ 651,857 ಅಂತರಾಷ್ಟ್ರೀಯ ಪ್ರವಾಸಿಗರು ಭೇಟಿ ನೀಡಿದ್ದಾರೆ.
ಗುರುವಾರ, 19 ಸೆಪ್ಟೆಂಬರ್ 2024
1:57 ಅಪರಾಹ್ನ
Daily PDF
ಅಂಕೋರ್ ವಾಟ್ ಏಷ್ಯಾದ ಅತ್ಯಂತ ಫೋಟೋಜೆನಿಕ್ ತಾಣ
Authored by:
Jyoti Angadi