* ಅಂಡಮಾನ್ ದ್ವೀಪದ ಬಳಿ ತೈಲ ನಿಕ್ಷೇಪ ಪತ್ತೆಯಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಆಯಿಲ್ ಇಂಡಿಯಾ ಲಿಮಿಟೆಡ್ (OIL) ತಿಳಿಸಿದೆ. ಆದರೆ ಪತ್ತೆಯಾದ ನಿಕ್ಷೇಪದ ಪ್ರಮಾಣವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.
* ಈ ನಿಕ್ಷೇಪವು ಅಂಡಮಾನ್ ಸಮುದ್ರ ಪ್ರದೇಶದ ವಿಜಯಪುರಂ–2ರ ಎರಡನೇ ಬಾವಿಯಲ್ಲಿ ಪತ್ತೆಯಾಗಿದೆ. ಈ ಸಂಶೋಧನೆಗೆ OIL ಜೊತೆಗೆ ಓಎನ್‌ಜಿಸಿ (ONGC) ಸಹ ಪಾಲುದಾರ ಸಂಸ್ಥೆಯಾಗಿದೆ.
* ಈ ವರ್ಷದ ಮಾರ್ಚ್‌ನಲ್ಲಿ ONGC ಕೂಡ ಅಂಡಮಾನ್ ಸಮುದ್ರದಲ್ಲಿ ಸಂಶೋಧನೆ ನಡೆಸಿತ್ತು, ಆದರೆ ಅದರ ಫಲಿತಾಂಶ ಇನ್ನೂ ಸ್ಪಷ್ಟವಾಗಿಲ್ಲ.
* ಕೇಂದ್ರ ತೈಲ ಸಚಿವ ಹರದೀಪ್ ಸಿಂಗ್ ಪುರಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ, ಅಂಡಮಾನ್ ದ್ವೀಪದ ಪೂರ್ವ ಕರಾವಳಿಯಿಂದ ಸುಮಾರು 17 ಕಿ.ಮೀ ದೂರದಲ್ಲಿ ತೈಲ ನಿಕ್ಷೇಪ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಅಂಡಮಾನ್ ಸಮುದ್ರದಲ್ಲಿ ತೈಲ ನಿಕ್ಷೇಪ ಪತ್ತೆ
Published by Jyoti Angadi
29 ಸೆಪ್ಟೆಂಬರ್ 2025