➤ ಸಾರನಾಥದ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ: ಗೌತಮ ಬುದ್ಧನು ಬೋಧಗಯಾದಲ್ಲಿ ಜ್ಞಾನೋದಯ (Enlightenment) ಪಡೆದ ನಂತರ, ಸಾರನಾಥದ ಋಷಿಪತನ (ಮೃಗದಾವ/ಜಿಂಕೆ ವನ) ಕ್ಕೆ ಆಗಮಿಸಿ, ತಮ್ಮ ಐವರು ಶಿಷ್ಯರಿಗೆ (ಪಂಚವರ್ಗೀಯ ಭಿಕ್ಷುಗಳು) ಪ್ರಥಮ ಬೋಧನೆ ನೀಡಿದರು.
- ಧಮ್ಮಚಕ್ಕಪ್ಪವತ್ತನ ಸುತ್ತ (Dhammacakkappavattana Sutta): ಬುದ್ಧರ ಪ್ರಥಮ ಧರ್ಮೋಪದೇಶವನ್ನು 'ಧರ್ಮಚಕ್ರ ಪ್ರವರ್ತನ' ಎನ್ನಲಾಗುತ್ತದೆ. ಇಲ್ಲಿ ಬುದ್ಧರು ಚತುರಾರ್ಯ ಸತ್ಯಗಳು (Four Noble Truths) ಮತ್ತು ಅಷ್ಟಾಂಗ ಮಾರ್ಗಗಳನ್ನು (Eightfold Path) ಜಗತ್ತಿಗೆ ಬೋಧಿಸಿದರು.
- ಸಾಮ್ರಾಟ್ ಅಶೋಕನ ಕೊಡುಗೆ: ಮೌರ್ಯ ಚಕ್ರವರ್ತಿ ಅಶೋಕನು ಕ್ರಿ.ಪೂ. 3ನೇ ಶತಮಾನದಲ್ಲಿ ಸಾರನಾಥಕ್ಕೆ ಭೇಟಿ ನೀಡಿ ಇಲ್ಲಿ ಹಲವು ಸ್ತೂಪಗಳು ಹಾಗೂ ಪ್ರಸಿದ್ಧ ಅಶೋಕ ಸ್ತಂಭವನ್ನು (Ashoka Pillar) ನಿರ್ಮಿಸಿದನು.
- ರಾಷ್ಟ್ರೀಯ ಲಾಂಛನ: ಸಾರನಾಥದಲ್ಲಿ ದೊರೆತ ಅಶೋಕನ ಚತುರ್ಮುಖ ಸಿಂಹ ಪೀಠವೇ (Lion Capital) ಭಾರತದ ಅಧಿಕೃತ ರಾಷ್ಟ್ರೀಯ ಲಾಂಛನವಾಗಿದೆ. ಹಾಗೆಯೇ ಇದರಲ್ಲಿದ್ದ 'ಅಶೋಕ ಚಕ್ರ'ವು ಭಾರತದ ರಾಷ್ಟ್ರೀಯ ಧ್ವಜದ ಮಧ್ಯಭಾಗದಲ್ಲಿದೆ.
➤ ಸಾರನಾಥದಲ್ಲಿರುವ ಪ್ರಮುಖ ಸ್ಮಾರಕಗಳು:
- ಧಮೇಕ್ ಸ್ತೂಪ (Dhamek Stupa): ಬುದ್ಧನು ತನ್ನ ಮೊದಲ ಉಪದೇಶ ನೀಡಿದ ನಿಖರ ಸ್ಥಳವನ್ನು ಗುರುತಿಸಲು ಈ ಬೃಹತ್ ಸ್ತೂಪವನ್ನು ನಿರ್ಮಿಸಲಾಗಿದೆ.
- ಚೌಖಂಡಿ ಸ್ತೂಪ (Chaukhandi Stupa): ಜ್ಞಾನೋದಯದ ನಂತರ ಬುದ್ಧನು ತನ್ನ ಮೊದಲ ಐವರು ಶಿಷ್ಯರನ್ನು ಭೇಟಿಯಾದ ಸ್ಥಳದ ನೆನಪಿಗಾಗಿ ಇದನ್ನು ನಿರ್ಮಿಸಲಾಗಿದೆ.
- ಅಶೋಕ ಸ್ತಂಭದ ಅವಶೇಷಗಳು: ಮೌರ್ಯ ಕಲೆಯ ಅತ್ಯುತ್ತಮ ಮಾದರಿಯಾಗಿದ್ದು, ಪ್ರಸ್ತುತ ಸಾರನಾಥ ವಸ್ತುಸಂಗ್ರಹಾಲಯದಲ್ಲಿ (Archaeological Museum) ಸಂರಕ್ಷಿಸಲಾಗಿದೆ.
- ಮೂಲಗಂಧ ಕುಟಿ ವಿಹಾರ: ಬುದ್ಧನು ಸಾರನಾಥದಲ್ಲಿದ್ದಾಗ ತಂಗುತ್ತಿದ್ದ ಪವಿತ್ರ ಸ್ಥಳ.