* 1960ರಲ್ಲಿ ಅಮುಲ್‌ನ ಕ್ಲಾಸಿಕ್ ಮಾರ್ಕೆಟಿಂಗ್ ಅಭಿಯಾನ ಆರಂಭಿಸಿದ್ದ ಜಾಹೀರಾತು ಉದ್ಯಮದ ದಂತಕಥೆ ಸಿಲ್ವೆಸ್ಟರ್ ಡಾಕುನ್ಹಾ ಅವರು ಜೂನ್ 20 (ಮಂಗಳವಾರ) ನಿಧನರಾಗಿದ್ದಾರೆ.
* ಅಮುಲ್ ಡೈರಿ ಬ್ರಾಂಡ್ ಹೊಂದಿರುವ ಗುಜರಾತ್ ಮೂಲದ ಹಾಲು ಸಹಕಾರಿ ಸಂಸ್ಥೆ ಗುಜರಾತ್ ಕೋ ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ನಿಧನದ ವಿಷಯ ತಿಳಿಸಿದ್ದಾರೆ.
* 1966ರಲ್ಲಿ ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಒಡೆತನದ ಅಮುಲ್ ಬ್ರಾಂಡ್‌ಗಾಗಿ 'ಅಟ್ಟರ್ಲಿ ಬಟರ್ಲಿ' ಎಂಬ ಜನಪ್ರಿಯ ಅಭಿಯಾನವನ್ನು ರೂಪಿಸಿದ್ದರು.
* ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ಹಂಚಿಕೊಂಡ ಸಂತಾಪ ಸಂದೇಶದಲ್ಲಿ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ'ಬ್ರೇನ್ ಸಿಲ್ವೆಸ್ಟರ್ ಡಾಕುನ್ಹಾ ಅವರನ್ನು ಜಾಹೀರಾತು ಜಗತ್ತಿನ ದಂತಕಥೆ ಎಂದು ಬಣ್ಣಿಸಿದ್ದಾರೆ.
* 'ಅಟ್ಟರ್ಲಿ ಬಟರ್ಲಿ' ಎಂಬ ಜನಪ್ರಿಯ ಅಭಿಯಾನದ ಮೂಲಕ 'ಅಮುಲ್ ಗರ್ಲ್' ಅನ್ನು ಜಗತ್ತಿಗೆ ಪರಿಚಯಿಸಿದ್ದರು.
ಶುಕ್ರವಾರ, 23 ಜೂನ್ 2023
10:49 ಪೂರ್ವಾಹ್ನ
Daily PDF
ಅಮೂಲ್ ಗರ್ಲ್ ಸೃಷ್ಟಿಕರ್ತ ಸೆಲ್ವೆಸ್ಟರ್ ದಾಕುನ್ಹಾ ನಿಧನ
Authored by:
Akshata Halli